ಶ್ರೀವಿಲ್ಲಿಪುತೂರ್ ನ ದೇವಸ್ಥಾನ ಬೀದಿಯಲ್ಲಿ ಈ ಪಿಲವಕ್ಕಲ್ ಎಂಬ ಸಣ್ಣ ಹಳ್ಳಿ ಇದೆ. ಈ ಹಳ್ಳಿ ವತ್ರಪ ದ ಹತ್ತಿರವಿದೆ.ಜೊತೆಗೆ ಈ ಹಳ್ಳಿ ಮತ್ತು ದೇವಸ್ಥಾನದ ಆವರಣ ತಲುಪಲು ಒಂದು ಗಂಟೆಗಿಂತ ಕಡಿಮೆ ಸಮಯ ಸಾಕು.ಈ ಹಳ್ಳಿಯಲ್ಲಿರುವ ಡ್ಯಾಮ್ ಜನಪ್ರಿಯವಾಗಿದೆ.ಈ ಡ್ಯಾಮ್ ಇಂದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಸಹಾಯವಾಗಿದೆ.ಕೃಷಿಗೆ ಬೇಕಾದ ನೀರಾವರಿ ಸೌಲಭ್ಯವನ್ನು ಈ ಡ್ಯಾಮ್ ನಿಂದ ಸತತವಾಗಿ ಪಡೆಯುತ್ತಿರುವುದರಿಂದ ಇಲ್ಲಿ ಕೃಷಿ ಪ್ರಮಾಣದಲ್ಲಿ ಅಗಾಧ ಹೆಚ್ಚಳವಾಗಿದೆ.ಈ ಡ್ಯಾಮ್ ಕಟ್ಟಿದ ನಂತರ ಅಲ್ಲಿನ ಸ್ಥಳೀಯ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.ಸುತ್ತಮುತ್ತಲಿನ ಪ್ರದೇಶಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಬೇಕು ಎಂದು ಸರ್ಕಾರ ಪ್ರಯತ್ನಿಸುತ್ತಲೇ ಇದೆ.ಇದು ಜಿಲ್ಲೆಯ ಜನಪ್ರಿಯ ಪಿಕ್ನಿಕ್ ಸ್ಥಳವಾಗಿರುವುದರಿಂದ ಈ ಸ್ಥಳ ಸ್ಥಳೀಯರ ಗಮನ ಸೆಳೆದಿದೆ.ರಾಜ್ಯ ಸರ್ಕಾರದಿಂದ ಇನ್ನಷ್ಟು ಅಬಿವೃದ್ಧಿಗೊಳಿಸಿದರೆ ಹೆಚ್ಚು ಹೆಚ್ಚು ಪ್ರವಾಸಿಗರು ಬರುವುದರಿಂದ ಸ್ಥಳೀಯರಿಗೆ ಇನ್ನಷ್ಟು ಅನುಕೂಲವಾಗುತ್ತದೆ.


Click it and Unblock the Notifications