Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು » ಗುಂಬಜ್

ಗುಂಬಜ್, ಶ್ರೀರಂಗಪಟ್ಟಣ

2

ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವ ಪ್ರತಿಪ್ರವಾಸಿಗನು ಇಲ್ಲಿನ ಟಿಪ್ಪುವಿನ ಕೋಟೆ ಎಂದೆ ಹೆಸರಾದ ಗುಂಬಜ್ ಗೆ ಭೇಟಿಕೊಡಲೆಬೇಕು. 20 ಮೀಟರ್ ಎತ್ತರ ಈ ಕಟ್ಟಡವು ಟಿಪ್ಪು ಹಾಗು ಟಿಪ್ಪುವಿನ ತಂದೆ ಹೈದರಾಲಿ ಮತ್ತು ತಾಯಿಯಾದ ಫಾತಿಮಾ ಬೇಗಂರ ಸಮಾಧಿ ಹೊಂದಿರುವುದರಿಂದ ಪ್ರಸಿದ್ಧವಾಗಿದೆ. ಅಲ್ಲದೆ ಟಿಪ್ಪುವಿನ ಮಂತ್ರಿಗಳು ಮತ್ತು ಇತರ ರಾಜ ಪರಿವಾರದವರು, ಸಂಬಂಧಿಗಳನ್ನು ಇಲ್ಲಿ ಸಮಾಧಿಮಾಡಲಾಗಿದೆ.ಈ ಮನಮೋಹಕವಾದ ಗೋರಿಯು ಗ್ರಾನೈಟಿನ ಚಾವಣಿ, ಕೆತ್ತನೆಗಳಿಂದ ಕೂಡಿದ ಗೋಡೆಗಳು ಮತ್ತು ಟಿಪ್ಪು ಹಾಗು ಹೈದರಾಲಿಯರು ಮೈಸೂರನ್ನು ಆಳಿದ್ದನ್ನು ಪ್ರದರ್ಶಿಸುವ 36 ಮನೋಹರವಾದ ಗ್ರಾನೈಟ್ ಸ್ತಂಭಗಳನ್ನು  ಹೊಂದಿದೆ. 220 ವರ್ಷ ಹಳೆಯದಾದ ಈ ಕೋಟೆಯು ಒಂದು ಎತ್ತರವಾದ ಜಗಲಿಯ ಮೇಲೆ ಕಟ್ಟಲ್ಪಟ್ಟಿದ್ದು, ಇಂಡೋ –ಇಸ್ಲಾಮಿಕ್ ವಾಸ್ತುಶೈಲಿಯನ್ನು ಹೊಂದಿದೆ.  ಈ ಗುಂಬಾಜಿ ಬಾಗಿಲುಗಳನ್ನು ಎಬೋನಿ ಮರದಿಂದ ಮಾಡಲಾಗಿದ್ದು, ಅವುಗಳನ್ನು ದಂತದಿಂದ ಅಲಂಕರಿಸಲಾಗಿದೆ. ಇವುಗಳನ್ನು ಲಾರ್ಡ್ ಡಾಲ್ ಹೌಸಿ ನೀಡಿದನಂತೆ. ಬ್ರಿಟೀಷರು ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ ಇಲ್ಲಿ ಇದ್ದ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಮೂರು ಬಾಗಿಲುಗಳನ್ನು ಲಂಡನ್ ಗೆ ಸಾಗಿಸಿದರು. ಪ್ರಸ್ತುತ ಅವುಗಳನ್ನು ಲಂಡನ್ನಿನ ಆಲ್ಬಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಇಲ್ಲಿನ ಒಳ ಗೋಡೆಗಳಲ್ಲಿ ಹೊಂಬಣ್ಣದ ಹುಲಿಯ ಪಟ್ಟೆಗಳು ಹಾಗು ಜೊತೆಗೆ ಮೊಗಸಾಲೆಯಲ್ಲಿ ಕಪ್ಪು ಸ್ತಂಭಗಳನ್ನು ಕಾಣಬಹುದು.  ಈ ಸ್ಮಾರಕದ ಆವರಣದಲ್ಲಿ ರಂಗನಾಥಸ್ವಾಮಿ ಮತ್ತು ಜುಮ ಮಸೀದಿಗಳು ಇವೆ. ಈ ಸ್ಥಳವು ಪ್ರಶಾಂತವಾದ ಉದ್ಯಾನವನ್ನೊಳಗೊಂಡಿದೆ ಇದ್ದಕ್ಕೆ ಹೊಂದಿಕೊಂಡಂತೆ ಮಸ್ಜಿದ್ –ಇ – ಅಕ್ಸ ಎಂಬ ಮಸೀದಿಯಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed