ಶೃಂಗೇರಿ ಪ್ರವಾಸಿಗರಿಗೆ ಶಿಫಾರಸು ಮಾಡಬಹುದಾದ ಇನ್ನೊಂದು ಸ್ಥಳವೆಂದರೆ 'ಸಿರಿಮನೆ ಜಲಪಾತ'. ಇದು ಪಟ್ಟಣದಿಂದ 20 ಕಿಲೋಮೀಟರು ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಗಟ್ಟದಲ್ಲಿ ಅನೇಕ ಜಲಪಾತಗಳಿವೆ. ಸಿರಿಮನೆ ಜಲಪಾತವನ್ನು ಒಂದು ಚಿಕ್ಕ ಆದರೆ ಸುಂದರವಾದ ಜಲಪಾತವೆಂದು ಗುರುತಿಸಲಾಗಿದೆ. ಮುಂಗಾರು ಕಳೆದ ಬಳಿಕ ಇಲ್ಲಿಗೆ ಭೇಟಿ ಕೊಡಲು ಪ್ರಶಸ್ತ ಸಮಯ. ಆಗ ಇಲ್ಲಿ ನೀರು ಪ್ರವಹಿಸುವುದನ್ನು ನೋಡುವುದೇ ಚನ್ನ.


Click it and Unblock the Notifications