ಶೃಂಗೇರಿ ಪ್ರವಾಸಿಗರಿಗೆ ಇನ್ನೂ ಸಮಯಾವಕಾಶವಿದ್ದರೆ, ಮುಂದಿನ ಶಿಫಾರಸು, ಮಲಯಾಳ ಬ್ರಹ್ಮ ದೇವಾಲಯ. ಈ ದೇವಾಲಯದ ಮುಖ್ಯ ದೇವರು ಸ್ಥಳೀಯವಾಗಿ 'ಮಲಯಾಳ ಬ್ರಹ್ಮ' ಎಂದೇ ಖ್ಯಾತವಾಗಿರುವ 'ಕ್ಷೇತ್ರ ಪಾಲಕ'. ಪ್ರಖ್ಯಾತ ಜನಪದ ಕಥೆ ಪ್ರಕಾರ ಒಬ್ಬ ಮಲಯಾಳ ಬ್ರಾಹ್ಮಣ ವಿದ್ವಾಂಸ ತನ್ನ ಜ್ಞಾನ ವನ್ನು ಹಂಚಿ ಕೊಳ್ಳದ್ದರಿಂದ ಬ್ರಹ್ಮ ರಾಕ್ಷಸನಾಗಿ ಬದಲಾಗಿ ಹೋದ. ನಂತರ ಸಂತ ವಿದ್ಯಾರಣ್ಯರು ಅವನಿಗೆ ಕ್ಷೇತ್ರ ಪಾಲಕನಾಗಿ ಸೇವೆ ಸಲ್ಲಿಸಲು ಆಜ್ಞಾಪಿಸಿದರು. ಸದರಿ ವಿಗ್ರಹವು ಕೈಯ್ಯಲ್ಲಿ ಗದೆ ಹಿಡಿದಿದ್ದು, ಶಾರದಾಂಬ ದೇವಸ್ಥಾನದ ಎಡ ಪ್ರವೇಶ ದ್ವಾರದಲ್ಲಿ ಸ್ಥಾಪಿತವಾಗಿದೆ.


Click it and Unblock the Notifications