ಶೃಂಗೇರಿ ಪ್ರವಾಸಿಗರಿಗೆ ಭೇಟಿ ಕೊಡಿರೆಂದು ಶಿಫಾರಸು ಮಾಡಬಹುದಾದ ಇನ್ನೊಂದು ಸ್ಥಳ ಈ ಚಪ್ಪರ ಆಂಜನೇಯ ದೇವಸ್ಥಾನ. ಹೆಸರೇ ಸೂಚಿಸುವಂತೆ ಇದು ಹನುಮ ದೇವರಿಗೆ ಅರ್ಪಿತವಾದುದು. ಈ ಸ್ಥಳ ತಲುಪುತಿದ್ದ ಹಾಗೆಯೇ ಭಕ್ತರಿಗೆ ಕಪ್ಪು ಶಿಲೆಯ ಹನುಮನ ವಿಗ್ರಹ ನೋಡಲು ಸಿಗುತ್ತದೆ. ಜೊತೆಗೆ, ಶಿವ ಹಾಗು ಇನ್ನಿತರೇ ನಾಗ ದೇವತೆಗಳ ಗುಡಿಗಳನ್ನೂ ದೇವಸ್ಥಾನದ ಒಳಗಡೆ ಕಾಣಬಹುದು. ಪುರಾಣದ ಒಂದು ನಂಬಿಕೆಯಂತೆ, ಒಂದು ಚಪ್ಪರವನ್ನು ಆಂಜನೇಯ ಸ್ವಾಮಿ ಯಾತ್ರಿಗಳ ರಕ್ಷಣೆಗಾಗಿ ಸೃಷ್ಟಿಸಿದರು ಅದು ಯಾತ್ರಿ ಗಳ ಮೆಚ್ಚುಗೆಗೆ ಪಾತ್ರವಾಯಿತು. ಇಲ್ಲಿನ ದೇವಸ್ಥಾನಕ್ಕೆ ನಿಂಬೆ ಹಣ್ಣು ಮತ್ತು ವೀಳ್ಯದೆಲೆಗಳನ್ನು ಪ್ರಮುಖವಾಗಿ ಅರ್ಪಿಸಲಾಗುತ್ತದೆ.


Click it and Unblock the Notifications