ಖ್ವಾಜಾ ಮೊಯಿನುದ್ದೀನ್ ನಕ್ಸ್ ಬಂಧಿ ಅವರ ಖಾಂಕಾವು ನಕ್ಸ್ ಬಂಧ್ ದೇವಾಲಯ ಎಂದು ಪ್ರಸಿದ್ಧವಾಗಿದೆ. ಇದು ಶ್ರೀನಗರದ ಮಧ್ಯಭಾಗದಲ್ಲಿ ನೆಲೆಸಿದೆ. ಇದು ಮುಸ್ಲೀಮರಿಗೆ ಬಹಳ ಪವಿತ್ರವಾದ ಸ್ಥಳವಾಗಿದೆ. ಇದಕ್ಕೆ ಕಾರಣ ಮೊಯಿ ಎ ಮುಕದ್ದಾಸ್ ಅಥವಾ ಪ್ರವಾದಿ ಮೊಹಮ್ಮದ್ ಅವರ ತಲೆಕೂದಲನ್ನು ಹಝರತ್ ಬಾಗ್ ಗೆ ತೆಗೆದುಕೊಂಡು ಹೋಗುವ ಮೊದಲು ಇಲ್ಲಿ ಇಡಲಾಗಿತ್ತು.
ಇದನ್ನು ಮೊಘಲ್ ಸುಲ್ತಾನ ಷಹ ಜಹಾನ್ ಕಟ್ಟಿಸಿದ್ದಾನೆ. ಇದರ ಖಟಮ್ ಬಂದ ಛಾವಣಿ ಇದರ ಇನ್ನೊಂದು ಆಕರ್ಷಣೆ. ಇಲ್ಲಿ ಸಣ್ಣ ಸಣ್ಣ ಮರದ ತುಂಡುಗಳು ಮೊಳೆಯ ಸಹಾಯವಿಲ್ಲದೆ ಕೇವಲ ಅದರ ಜ್ಯಾಮಿತೀಯ ವಿನ್ಯಾಸದಿಂದ ಜೋಡಿಸಿಡಲಾಗಿದೆ. ಇದು ಪುರಾತತ್ವ ಕಾರಣದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ.


Click it and Unblock the Notifications