Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಚಾರರ್-ಐ-ಶರೀಫ್

ಚಾರರ್-ಐ-ಶರೀಫ್, ಶ್ರೀನಗರ

1

ಶ್ರೀನಗರದಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಚಾರರ್-ಐ-ಶರೀಫ್, ಹಜರತ್ ಶೇಖ್ ನೂರ್-ಉದ್ದೀನ್-ವಾಲಿ ಎಂದೇ ಜನಪ್ರಿಯವಾಗಿದೆ. ಇದು 600 ವರ್ಷಗಳ ಹಿಂದೆ ಮುಸ್ಲಿಂ ಸೂಫಿ ಸಂತ ಹಜರತ್ ಶೇಖ್ ನೂರ್-ಉದ್ದೀನ್-ವಾಲಿಯಿಂದ ನಿರ್ಮಿಸಲ್ಪಟ್ಟಿತು. ಸಲಾರ್ ಸಾನ್ಜ್ ಎಂಬಾಕೆಗೆ ಮಗನಾಗಿ 1377ರಲ್ಲಿ ಇವರು ಜನಿಸಿದ್ದರು. ಹಜರತ್ ತಾನು ಹುಟ್ಟಿದ ಮೂರೇ ದಿನಕ್ಕೆ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ನಂತರ ಲಾಲ್ ದೆದ್ ಎಂಬ ಯೋಗಿನಿಯೊಬ್ಬಳ ಹಾಲನ್ನು ಸ್ವಿಕರಿಸಲು ಪ್ರಾರಂಭಿಸಿದನು. ಕ್ರಮೇಣ ಆಕೆಯೇ ಇವರನ್ನು ತನ್ನ ಆಧ್ಯಾತ್ಮಿಕ ಉತ್ತರಾಧಿಕಾರಿಯನ್ನಾಗಿ ನೇಮಿಸಿದಳು.

ಹಜರತ್, ಕಣಿವೆಗಳಲ್ಲಿ ರಿಷಿಮ್ ಅನ್ನು ಪರಿಚಯಿಸಿದ ಮೊದಲ ವ್ಯಕ್ತಿಯಾಗಿದ್ದರು. ಅವರು ಅಹಿಂಸೆ, ಸಸ್ಯಾಹಾರ, ಸಹಿಷ್ಣುತೆ ಮತ್ತು ಸಾಮುದಾಯಿಕ ಸಾಮರಸ್ಯವನ್ನು ಬೋಧಿಸಿದರು. ಇವರ ಅನುಯಾಯಿಗಳು ಅಲಂದರ್-ಈ-ಕಾಶ್ಮೀರ, ಶೇಖ್ ಉಲ್ ಅಲಮ್, ಸರ್ಕೇಲ್-ಈ-ರಿಶಿಯಾ ಮತ್ತು ಶೇಖ್ ನೂರ್ ಉದ್ದೀನ್ ನೂರಾನಿ ಎಂದು ವಿವಿಧ ಹೆಸರುಗಳಿಂದ ಅವರನ್ನು ಕರೆಯುತ್ತಿದ್ದರು. ಹಜರತ್ ಶೇಖ್ ತತ್ವಶಾಸ್ತ್ರ ಮತ್ತು ಕಾವ್ಯ ಕ್ಷೇತ್ರಗಳಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು 1438 ರಲ್ಲಿ ನಿಧನರಾದಾಗ, ಸುಮಾರು ಒಂಬತ್ತು ಲಕ್ಷ ಅನುಯಾಯಿಗಳು ಎರಡು ದಿನಗಳೊಳಗೆ ಈ ದೇವಾಲಯದಲ್ಲಿ ಸೇರಿದ್ದರು. ಅವರ ದೇಹವನ್ನು ಚಾರರ್-ಐ-ಶರೀಫ್ ನಲ್ಲಿ ಸಂಸ್ಕಾರ ಮಾಡಲಾಯಿತು. ಈ ದೇವಾಲಯ ಹಲವು ಬಾರಿ ಹಾಳಾಗಿದ್ದರೂ ಕೂಡ, ಇದು ಇಂದಿಗೂ ಕೂಡ ದೊಡ್ಡ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
01 Apr,Wed
Return On
02 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Apr,Wed
Check Out
02 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Apr,Wed
Return On
02 Apr,Thu