ಜಲಪಾತ ಕೇಂದ್ರ ವಿಭಿನ್ನವಾದ ಮತ್ತು ಅತ್ಯಾಕರ್ಷಕವಾದ ಹಚ್ಚ ಹಸಿರಿನ ಮಧ್ಯೆ ನೆಲೆ ನಿಂತಿರುವ ತಾಣವಾಗಿದ್ದು ಶೋಜಾದಿಂದ ಕೇವಲ 1 ಕಿಲೋ ಮೀಟರ್ ಅಂತರದಲ್ಲಿದೆ. ಕಾಡಿನ ದಾರಿಯಲ್ಲಿ ನಡೆಯುವ ಮೂಲಕ ಜಲರಾಶಿಯನ್ನು ತಲುಪಬಹುದು. ಸ್ಥಳೀಯರು ಇಲ್ಲಿಗೆ ಬೆಳಗಿನ ವಾಕಿಂಗ್ ಗಾಗಿ ತೆರಳುತ್ತಾರೆ. ಛಾಯಾಚಿತ್ರ ಕಲಾವಿದರಿಗೂ ನಿಸರ್ಗದ ಮಡಿಲಲ್ಲಿ ಸಮಯ ಕಳೆಯಲು ಇಚ್ಚಿಸುವವರಿಗೂ ಇದು ಹೇಳಿ ಮಾಡಿಸಿದ ಜಾಗ. ತಣ್ಣನೆಯ ಜಲಪಾತದ ನೀರು ಸಿಹಿ ಸಿಹಿಯಾಗಿದೆ.


Click it and Unblock the Notifications