ಇಲ್ಲಿ ದೊರೆಯುವ ವಿಶೇಷವಾದ ಹ್ಯಾಂಡಿ ಕ್ರಾಫ್ಟ್ ವಸ್ತುಗಳನ್ನು ಖರೀದಿಸದೆ ಇದ್ದಲ್ಲಿ ಸಾವಂತವಾಡಿಯ ಪ್ರವಾಸ ಖಂಡಿತ ಪರಿಪೂರ್ಣವಾಗುವುದಿಲ್ಲ. ಮರದ ಗೊಂಬೆಗಳು, ಆಟಿಕೆಗಳು ಹಾಗೂ ಅನೇಕ ಆಕರ್ಷಕ ವಸ್ತುಗಳನ್ನು ಇಲ್ಲಿ ಖರೀದಿಸಬಹುದು.
ತಕ್ಷಣಕ್ಕೆ ಏನಾದರೂ ಖರೀದಿಸಬೇಕೆಂದರೆ ಇಲ್ಲಿ ನಡೆಯುವ ಮಂಗಳವಾರದ ಸಂತೆಗೆ ಭೇಟಿ ನೀಡಬಹುದು. ಇಲ್ಲಿ ಒಳ್ಳೋಳ್ಳೆ ಟ್ರಾವೆಲರ್ಸ್ ಬ್ಯಾಗ್, ಆಟಿಕೆಗಳು ಹಾಗೂ ಸ್ಥಳೀಯ ರುಚಿಕರ ತಿನಿಸುಗಳನ್ನು ಖರೀದಿಸಬಹುದು. ಅವುಗಳಲ್ಲಿ ಗೋಡಂಬಿಯ ಲಾಡು ಹಾಗೂ ಹಲಸಿನ ತಿನಿಸುಗಳು ತುಂಬಾ ಜನಪ್ರಿಯವಾದವುಗಳು.


Click it and Unblock the Notifications