Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಹನ್ » ಆಕರ್ಷಣೆಗಳು » ಭೀಮಕಾಲಿ ದೇವಾಲಯ ಸಂಕೀರ್ಣ

ಭೀಮಕಾಲಿ ದೇವಾಲಯ ಸಂಕೀರ್ಣ, ಸರಹನ್

3

ಭೀಮಕಾಲಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾಸ್ಥಳವಾಗಿದೆ. ದೇವಿ ಭೀಮಕಾಲಿಗೆ ಮೀಸಲಾದ ಈ ದೇವಸ್ಥಾನವು 800 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಿಂದೂ ಮತ್ತು ಬೌದ್ಧ ವಾಸ್ತುಶಿಲ್ಪಿಯ ಶೈಲಿಗಳ ಮಿಶ್ರಣವಾಗಿದ್ದು ತನ್ನ ಅನನ್ಯ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು ಗಳಿಸಿದೆ.

ಈ ಹಳೆಯ ದೇವಾಲಯದಲ್ಲಿ ಈಗ ಸಾಂಪ್ರದಾಯಿಕ 'ಆರತಿ' ಸಮಯದಲ್ಲಿ ಅಂದರೆ ಬೆಳಿಗ್ಗೆ ಅಥವಾ ಸಂಜೆಯ ಆರಂಭದ ಅವಧಿಯನ್ನು ಹೊರತುಪಡಿಸಿ ಉಳಿದ ಸಮಯ ಸಾರ್ವಜನಿಕ ವೀಕ್ಷಣೆಗೆ  ಅವಕಾಶ ನೀಡಲಾಗುತ್ತಿಲ್ಲ.  ಇನ್ನೊಂದು ನೂತನ ದೇವಾಲಯವನ್ನು 1943 ರಲ್ಲಿ ಈ ದೇವಾಲಯದ ಆವರಣದ ಒಳಗೆ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ  ದೇವತೆ ಭೀಮಕಾಲಿಯ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಘುನಾಥ್ ಮತ್ತು ಭೈರೋನ್ ನ ನರಸಿಂಹ ದೇವಾಲಯ ಇಲ್ಲಿನ ದೇವಾಲಯದ ಸಂಕೀರ್ಣದಲ್ಲಿ ಕಂಡುಬರುವ ಎರಡು ಪ್ರಮುಖ ದೇವಾಲಯಗಳಾಗಿವೆ.

ಭೀಮಕಾಲಿ ದೇವಾಲಯವನ್ನು ಪ್ರಮುಖ 'ಶಕ್ತಿಪೀಠ' ಅಥವಾ ಭಾರತದಲ್ಲಿನ 'ಪವಿತ್ರ ತಾಣ' ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ,  ಈ ಸ್ಥಳದಲ್ಲೇ ವೈವಾಹಿಕ ಸುಖ ಮತ್ತು ದೀರ್ಘಾಯುಷ್ಯಗಳ ಅಧಿದೇವತೆಯಾದ ಹಾಗು ಶಿವನ ಅರ್ಧಾಂಗಿಣಿಯಾದ 'ಸತಿ' ಯ ಎಡ ಕಿವಿ ಬಿದ್ದಿತ್ತೆನ್ನಲಾಗಿದೆ. ಇನ್ನೊಂದು ದಂತಕಥೆಯ ಪ್ರಕಾರ, ಭೀಮಕಾಲಿ ದೇವಿಯು ಮಹಾನ್ ಹಿಂದೂ ಋಷಿಯಾಗಿದ್ದ ಬ್ರಹ್ಮಗಿರಿಯ ದಂಡದಲ್ಲಿ ದರುಶನವಿತ್ತಳೆಂದುಹೇಳಲಾಗುತ್ತದೆ. ಇಲ್ಲಿ, ಜನಪ್ರಿಯ ಹಿಂದೂ ಹಬ್ಬವಾದ ದಸರಾವನ್ನು ಆಡಂಬರ ಮತ್ತು ಸಂಭ್ರಮದಿಂದ ಪ್ರತಿ ವರ್ಷ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri