ಸರಹನ್ ಗೆ ಹೋಗಲು ಆಸಕ್ತಿಯುಳ್ಳ ಪ್ರವಾಸಿಗರು ಏಪ್ರಿಲ್ ಮತ್ತು ನವೆಂಬರ್ ತಿಂಗಳುಗಳ ಮಧ್ಯೆ ಈ ತಾಣಕ್ಕೆ ಭೇಟಿ ನೀಡಬಹುದಾಗಿದೆ. ಪ್ರವಾಸಿಗರು ಚಳಿಗಾಲದಲ್ಲಿ ಕೂಡಾ ಸರಹನ್ ಪ್ರದೇಶಕ್ಕೆ ಪ್ರವಾಸಕ್ಕೆ ಬರಲು ಯೋಜಿಸಬಹುದು.
(ಏಪ್ರೀಲ್ ನಿಂದ ಜೂನ್) : ಸರಹನ್ ನಲ್ಲಿ ಬೇಸಿಗೆ ಏಪ್ರಿಲ್ ನಿಂದ ಆರಂಭವಾಗುತ್ತದೆ ಮತ್ತು ಜೂನ್ ತಿಂಗಳ ತನಕ ಮುಂದುವರೆಯುತ್ತದೆ. ಬೇಸಿಗೆ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 25 ಡಿ. ಸೆ ಮತ್ತು 10 ಡಿ. ಸೆ ನಷ್ಟು ದಾಖಲಾಗುತ್ತದೆ.
(ಆಗಸ್ಟ್ ನಿಂದ ನವೆಂಬರ್) : ಮಳೆಗಾಲವು ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಈ ಕಾಲದಲ್ಲಿ, ಈ ಪ್ರದೇಶವು ಮಂದ ಮತ್ತು ಸಾಧಾರಣ ಮಳೆಯನ್ನು ಪಡೆಯುತ್ತದೆ. ತುಲನಾತ್ಮಕವಾಗಿ ಹೇಳುವುದಾದರೆ ಹಗಲಿನಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಮತ್ತು ರಾತ್ರಿ ತಂಪಾಗಿರುತ್ತದೆ.
(ಡಿಸೆಂಬರ್ ನಿಂದ ಮಾರ್ಚ್) : ಸರಹನ್ ನಲ್ಲಿ ಡಿಸೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ತನಕ ಮುಂದುವರೆಯುವ ಚಳಿಗಾಲ ಅತ್ಯಂತ ಉಪಯುಕ್ತವಾಗಿದೆ. ಹಿಮಾಚಲ ಪ್ರದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಇಲ್ಲಿ ಚಳಿಗಾಲದಲ್ಲಿ ಬಹಳ ಕಠಿಣವಾಗಿರುವುದಿಲ್ಲ. ಚಳಿಗಾಲದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 20 ಡಿ. ಸೆ ಮತ್ತು 4 ಡಿ. ಸೆ ದಾಖಲಾಗುತ್ತದೆ. ಈ ಋತುವಿನಲ್ಲಿ ಹವಾಮಾನ ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ. ಆದರೆ ತಾಪಮಾನವು ಸೂರ್ಯಾಸ್ತದ ನಂತರ ಕುಸಿಯಬಹುದು.