Search
  • Follow NativePlanet
Share

ಸನಸರ್ - ಸಾಹಸ ಮನೋಭಾವನೆಯನ್ನು ಉಕ್ಕಿಸುವ ತಾಣ

10

ಸನ ಹಾಗು ಸರ್ ಗಳೆಂಬ ಎರಡು ಹಳ್ಳಿಗಳ ಸನಸರ್, ಪ್ರಾಕೃತಿಕ ಸೊಬಗುಗಳನ್ನು ಹೊತ್ತುನಿಂತ ಜಮ್ಮುಕಾಶ್ಮೀರ ರಾಜ್ಯದ ಒಂದು ಸುಂದರ ಹಳ್ಳಿ. ಕಪ್ಪಿನ ಆಕಾರದಲ್ಲಿರುವ ಈ ಸುಂದರ ಹುಲ್ಲುಗಾವಲಿನ ಪ್ರದೇಶ ತನ್ನಲ್ಲಿರುವ ಎರಡು ಕೆರೆಗಳಾದ ಸನ ಹಾಸು ಸರ್ ಗಳಿಂದ ತನ್ನ ಹೆಸರನ್ನು ಪಡೆದಿದೆ. ಈ ಕೆರೆಗಳು ಸ್ಥಳದಿಂದ 20 ಕಿ.ಮೀ ದೂರದಲ್ಲಿ ಪತ್ನಿತೋಪ್ ನ ಪಶ್ಚಿಮಕ್ಕೆ ನೆಲೆಸಿವೆ. ಸನಸರ್ ಅನ್ನು ಪ್ರೀತಿಯಿಂದ ಮಿನಿ ಗುಲ್ಮಾರ್ಗ್ ಎಂದೂ ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 2079 ಮೀಟರ್ ಎತ್ತರದಲ್ಲಿ ನೆಲೆಸಿದೆ.

ಸಮತಟ್ಟಾದ ಹಾಗು ಬೆಟ್ಟ ಪ್ರದೇಶಗಳೆರಡನ್ನೂ ಹೊಂದಿರುವ ಈ ಸ್ಥಳವು, ಉತ್ಸಾಹಮಯ ಚಟುವಟಿಕೆಗಳಾದ ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್, ಹಾಟ್ ಏರ್ ಬಲೂನಿಂಗ್, ಕುದುರೆ ಸವಾರಿ, ಬಂಡೆ ಹತ್ತುವಿಕೆ, ಚಾರಣ, ಕ್ಯಾಂಪಿಂಗ್ ಗಳಿಗೆ ಆದರ್ಶಪ್ರಾಯವಾಗಿದೆ. ಈ ಎಲ್ಲ ಸಾಹಸಮಯ ಚಟುವಟಿಕೆಗಳನ್ನು ಇಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರ ಆಯೋಜಿಸುತ್ತದೆ.

ಪ್ರವಾಸೋದ್ಯಮ ಇಲಾಖೆಯಿಂದ ಸ್ಥಾಪಿಸಲಾದ ಇಲ್ಲಿನ ಸ್ಥಳೀಯ ಅಂಗಡಿ ಮುಗ್ಗಟ್ಟುಗಳಿಂದ ಚಾರಣಕ್ಕೆ ಬೇಕಾದ ಉಪಕರಣಗಳನ್ನು ಪ್ರವಾಸಿಗರು ಪಡೆಯಬಹುದು. ಬೇಕಾದರೆ ಭದ್ರತಾ ಶುಲ್ಕವನ್ನು ಪಾವತಿಸಿ ಟ್ರೆಕಿಂಗ್ ಗೀಯರ್ಸ್ ಗಳನ್ನೂ ಕೂಡ ಪಡೆಯಬಹುದು. ಸಾಹಸೇತರ ಚಟುವಟಿಕೆಗಳನ್ನು ಕೂಡ ಇಲ್ಲಿ ಆಸ್ವಾದಿಸಬಹುದಾಗಿದೆ. ನಾಗ ಶಂಖ ಪಾಲ್ ಗೆ ಸಮರ್ಪಿಸಲಾದ ಶಂಖ ಪಾಲ್ ದೇವಸ್ಥಾನ ಇಲ್ಲಿರುವ ಪ್ರಮುಖ ಯಾತ್ರಾಧಾಮ. ಲಡೂ ಲಾಡಿ, ಶಾಂತ ಗಾಲ ಮತ್ತು ಸುರ್ನಿ ಕುಂಡ್ ಸನಸರ್ ನಲ್ಲಿರುವ ಪ್ರಮುಖ ಚಾರಣ ಮಾರ್ಗಗಳು.

ಪ್ರಯಾಣಿಕರು/ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಿಂದ ಇತ್ತೀಚಿಗಷ್ಟೆ ಅಭಿವೃದ್ಧಿಪಡಿಸಲಾದ ಒಂಬತ್ತು ರಂಧ್ರಗಳುಳ್ಳ ಗಾಲ್ಫ್ ಕ್ರೀಡೆಯನ್ನು ಇಲ್ಲಿ ಸವಿಯಬಹುದು. ಸಮಯಾವಕಾಶವಿದ್ದರೆ ಪ್ರವಾಸಿಗರು ನಾಗ ದೇವಸ್ಥಾನ, ಜಲಪಾತ ಮತ್ತು ಹಿಡನ್ ಕ್ರೀಕ್ (ಗುಪ್ತ ಖಾರಿ)ಗಳನ್ನು ಇಲ್ಲಿ ಅನ್ವೇಷಿಸಬಹುದು.

ಸನಸರ್ ಹಳ್ಳಿಯನ್ನು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ವಿಮಾನ, ರೈಲು ಮತ್ತು ರಸ್ತೆಯ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಬೇಸಿಗೆ ಅಂದರೆ ಮಾರ್ಚ್ ಹಾಗು ಮೇ ಮಧ್ಯದ ಸಮಯದಲ್ಲಿ ಇಲ್ಲಿ ಎಲ್ಲ ತರಹದ ಸಾಹಸಿ ಚಟುವಟಿಕೆಗಳು ನಡೆಯುವ ಕಾರಣ, ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಾರ್ಥಕ.

ಸನಸರ್ ಪ್ರಸಿದ್ಧವಾಗಿದೆ

ಸನಸರ್ ಹವಾಮಾನ

ಉತ್ತಮ ಸಮಯ ಸನಸರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸನಸರ್

  • ರಸ್ತೆಯ ಮೂಲಕ
    ಸನಸರ್ ಗೆ ತಲುಪಲು ದೆಹಲಿ, ಚಂಡೀಗಢ್, ಲುಧಿಯಾನಾ, ಮನಾಲಿ ಮತ್ತು ಶಿಮ್ಲಾಗಳಿಂದ ಬಸ್ಸುಗಳ ಸೌಲಭ್ಯವಿದೆ. ಮೊದಲು ಪ್ರವಾಸಿಗರು ಈ ಸ್ಥಳಗಳಿಂದ ಜಮ್ಮುವಿಗೆ ಬಸ್ ಅನ್ನು ಹಿಡಿಯಬೇಕು. ತದನಂತರ ಜಮ್ಮುವಿನಿಂದ ಸನಸರ್ ಗೆ ತೆರಳುತ್ತಿರುವ ಬಸ್ಸುಗಳಲ್ಲಿ ಸಾಗಬೇಕು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮು ತಾವಿ ರೈಲು ನಿಲ್ದಾಣವು ಸನಸರ್ ಗೆ ಹತ್ತಿರದಲ್ಲಿರುವ ರೈಲು ತುದಿ. ಈ ನಿಲ್ದಾಣವು ಚೆನ್ನೈ, ದೆಹಲಿ, ಮುಂಬೈನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಡೆಯಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಪಡೆದು ಸನಸರ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜಮ್ಮು ವಿಮಾನ ನಿಲ್ದಾಣ ಅಥವಾ ಸತ್ವಾರಿ ಏರ್ಪೋರ್ಟ್, ಸನಸರ್ ಗೆ ಹತ್ತಿರದಲ್ಲಿರುವ ವಾಯುನೆಲೆ. ಈ ವಿಮಾನ ನಿಲ್ದಾಣವು ದೆಹಲಿ, ಗೋವಾ, ಮುಂಬೈ, ಚಂಡೀಗಢ್, ಜೈಪುರ್, ಲೇಹ್ ಮತ್ತು ಶ್ರೀನಗರಗಳಂತಹ ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಡೆಯಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಪಡೆದು ಸನಸರ್ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri