ರುದ್ರನಾಥ - ಒಂದು ಧಾರ್ಮಿಕ ದ್ವಾರ

ಉತ್ತರಖಂಡದ ಸಾಮಾನ್ಯ ಎಲ್ಲಾ ಪ್ರದೇಶಗಳೂ ಚಾರಣಕ್ಕೆ ಅತ್ಯಂತ ಹೆಸರುವಾಸಿ. ಅಂತಹವುಗಳಲ್ಲಿ ರುದ್ರನಾಥ್ ಪ್ರದೇಶವು ಕೂಡಾ ಒಂದು. ಇಲ್ಲಿ ಪುರಾಣಗಳನ್ನು ನೆನಪಿಸುವಂತಹ ದೇವಾಲಯಗಳು ಹಾಗೂ ಅದನ್ನು ತಲುಪಲು ಬಳಸುವ ಚಾರಣ ಮಾರ್ಗಗಳು ರುದ್ರರಮಣೀಯ! ಸಾಹಸ ಪ್ರಿಯರಿಗೆ ಈ ಸ್ಥಳ ಔತಣವನ್ನು ನೀಡುವುದರಲ್ಲಿ ಸಂಶಯವಿಲ್ಲ!

ರುದ್ರನಾಥ್, ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಗ್ರಾಮ. ಇದು  ಸಮುದ್ರದ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿದೆ ಮತ್ತು ಹಿಮಚ್ಛಾದಿತ ಹಿಮಾಲಯ ಶ್ರೇಣಿಗಳ ಅದ್ಭುತ ನೋಟವನ್ನು ನೀಡುತ್ತದೆ. ಅಕ್ಷರಶಃ, ’ರುದ್ರನಾಥ ಪದ’ ’ಸಿಟ್ಟಾಗಿರುವವನು ಯಾರೋ ಅವನೇ’ (ರುದ್ರನಾಥ್) ಎಂಬರ್ಥವನ್ನು ನೀಡುತ್ತವೆ. ರುದ್ರನಾಥ್ ದೇವಾಲಯ ಈ ಭಾಗದ ಪ್ರಸಿದ್ಧ ದೇವಾಲಯವಾಗಿದ್ದು, ಪಂಚ ಕೇದಾರ(ಐದು ಕೇದಾರ)ದೇವಾಲಯಗಳಲ್ಲಿ ಮೂರನೇಯ ತೀರ್ಥಯಾತ್ರಾ ಸರಣಿಯಲ್ಲಿ ಬರುತ್ತದೆ. ಈ  ಸರಣಿಯ ಇತರ ನಾಲ್ಕು ದೇವಾಲಯಗಳೆಂದರೆ, ಕೇದಾರನಾಥ ದೇವಸ್ಥಾನ, ತುಂಗಾನಾಥ ದೇವಸ್ಥಾನ, ಮಧ್ಯಮಹೇಶ್ವರ ದೇವಸ್ಥಾನ ಮತ್ತು ಕಲ್ಪೇಶ್ವರ ದೇವಾಲಯ.

ರುದ್ರನಾಥ ದೇವಾಲಯ ನೀಲ ಕಂಠ ಮಹಾದೇವ ಎಂಬ ಹೆಸರಿನಲ್ಲಿ ಶಿನನನ್ನು ಇಲ್ಲಿ ಪೂಜಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವನ್ನು ಭಾರತೀಯ ಮಹಾಕಾವ್ಯ, ಮಹಾಭಾರತದ ಪೌರಾಣಿಕ ಪಾತ್ರಗಳಾದ ಪಾಂಡವರಿಂದ ನಿರ್ಮಿತವಾಗಿದೆ. ಕಥೆಯ ಸಾರಾಂಶವೆಂದರೆ, ಪಾಂಡವರು  ಮಹಾಭಾರತ ಯುದ್ಧದಲ್ಲಿ ಕೌರವರನ್ನು ಕೊಂದ ತಪ್ಪಿತಸ್ಥ ಭಾವನೆಯಿಂದ ಭಗವಾನ್ ಶಿವನಲ್ಲಿ ಕ್ಷಮೆ ಕೇಳಲು ಹೋದರು. ಆದರೆ ಶಿವ ಅವರನ್ನು ಸಂದರ್ಶನ ಮಾಡಲು ಬಯಸದೇ ತಾನೇ ಸ್ವತಃ ನಂದಿ (ಹೋರಿ) ವೇಶಧರಿಸಿ ಗಡ್ವಾಲ್ ಪ್ರದೇಶದಲ್ಲಿ ಅಡಗಿಕೊಳ್ಳುತ್ತಾನೆ. ಗುಪ್ತಕಾಶಿಯಲ್ಲಿ, ಪಾಂಡವರು ಈ ನಂದಿಯನ್ನು ಕಂಡು ಬಲವಂತವಾಗಿ ಅದನ್ನು ತಡೆಯಲು ಪ್ರಯತ್ನಿಸಿ ಯಶಸ್ವಿಯಾಗುವುದಿಲ್ಲ. ಇದಾದ ನಂತರ, ಶಿವನ ದೇಹದ ಭಾಗಗಳು ಐದು ವಿವಿಧ ಸ್ಥಳಗಳಲ್ಲಿ ಕಂಡುಬಂದಿತು. ಶಿವನ ಮುಖವನ್ನು ಕಂಡ ಸ್ಥಳದಲ್ಲಿ ರುದ್ರನಾಥ ದೇವಾಲಯವನ್ನು ಕಟ್ಟಲಾಗಿದೆ. ಇತರೆ ಸ್ಥಳಗಳು ಜಲಪ್ರದೇಶಗಳಾಗಿದ್ದು, ಅವುಗಳೆಂದರೆ ಸೂರ್ಯ ಕುಂಡ, ಚಂದ್ರ ಕುಂಡ, ತಾರಾ ಕುಂಡ, ಮತ್ತು ಮನಾ ಕುಂಡ ಮೊದಲಾದವುಗಳು. ಹಥಿ ಪರ್ವತ, ನಂದಾ ದೇವಿ, ನಂದ ಘುಂಟಿ ಮತ್ತು ತ್ರಿಶೂಲ್ ಮೊದಲಾದ ಸುಂದರ ಶಿಖರಗಳನ್ನು ಈ ದೇವಾಲಯದ ಸುತ್ತ ನೋಡಬಹುದು.

ಪ್ರವಾಸಿಗರು ಸಾಗರ ಗ್ರಾಮ ಮತ್ತು ಜೋಶಿಮಠ್ ಮೂಲಕ ಯಾತ್ರೆ ಮಾಡುತ್ತ ಈ ದೇವಸ್ಥಾನವನ್ನು ತಲುಪಬಹುದು. ಚಿತ್ರಸದೃಶ ಮೆಡೋಸ್/ ಹುಲ್ಲುಗಾವಲುಗಳ ಪ್ರದೇಶಗಳನ್ನು ಮಾರ್ಗ ಮಧ್ಯದಲ್ಲಿ ಕಾಣಬಹುದಾಗಿದೆ. ಅವುಗಳಲ್ಲಿ  ಪನಾರ್ ಬುಗೈಯಲ್ ಎಂಬ ಪ್ರದೇಶವು ವರ್ಣರಂಜಿತ ಕಾಡು ಹೂಗಳಿಂದ ಅಲಂಕೃತಗೊಂಡು ನೋಡಲು ಮನಮೋಹಕವಾಗಿದೆ. ಒಂದು ಜಲಪಾತ ಮತ್ತು ದೇವಾಲಯ ಈ ಹುಲ್ಲುಗಾವಲಿಗೆ ಹತ್ತಿರದಲ್ಲಿವೆ. ರುದ್ರನಾಥ್ ದ ಅತೀ ಎತ್ತರದ ಚಾರಣ ಮಾಡುವಿಕೆ ಮಾರ್ಗವು ಸಮುದ್ರ ಮಟ್ಟದಿಂದ 4000 ಮೀಟರ್ ಎತ್ತರದಲ್ಲಿರುವ ಪಿತೃಧರ್. ಈ ಸ್ಥಳದ ಸ್ವಾಸ್ಥ್ಯ ಮತ್ತು ಪ್ರಶಾಂತತೆ ಗಮ್ಯಸ್ಥಾನದ ಲಾವಣ್ಯವನ್ನು ಹೆಚ್ಚಿಸುತ್ತವೆ.

ಸ್ಥಳದ ಮತ್ತೊಂದು ಪ್ರಸಿದ್ಧ ಆಕರ್ಷಣೆಯೆಂದರೆ ಹಿಮಾಚ್ಛಾದಿತ ಶಿಖರಗಳು, ಸುತ್ತಲೂ ಒಂದು ಚಿತ್ರಸದೃಶ ಸರೋವರವಾಗಿರುವ ನಂದಿಕುಂಡ. ಒಂದು ಜಾನಪದ ಕಥೆಯ ಪ್ರಕಾರ, ಶಿವನ ರೂಪ, ನಂದಿಯು ಈ ಸರೋವರದಲ್ಲಿ ನೀರನ್ನು ಕುಡಿಯುತ್ತಿತ್ತು. ಪ್ರವಾಸಿಗರು ಸರೋವರದಲ್ಲಿ ಸುಂದರ ಚೌಕಖುಂಬ ಶಿಖರದ ಪ್ರತಿಫಲನವನ್ನು ನೋಡಬಹುದು. ಪ್ರವಾಸಿಗರು ರುದ್ರನಾಥ ದೇವಾಲಯದ ಸುತ್ತಲಿರುವ ಕಲ್ಪೇಶ್ವರ ದೇವಾಲಯ ಮತ್ತು ಮಧ್ಯಮೇಶ್ವರ ದೇವಸ್ಥಾನಗಳಿಗೂ, ಭೇಟಿ ಮಾಡಬಹುದು.

ರುದ್ರನಾಥ್ ಗೆ ಪ್ರಯಾಣ ಬೆಳೆಸುವ ಯೋಜನೆಯುಳ್ಳ ಪ್ರವಾಸಿಗರು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಸ್ಥಳಕ್ಕೆ ಹತ್ತಿರವಾದ ವಾಯುನೆಲೆಯಾಗಿ  ಕಾರ್ಯನಿರ್ವಹಿಸುತ್ತದೆ. ರುದ್ರನಾಥ  ಪ್ರದೇಶವನ್ನು ತಲುಪಲು ಗೋಪೇಶ್ವರ ಚಾರಣ ಮಾರ್ಗವೂ ಒಂದು. ರಿಷಿಕೇಶ ರೈಲು ನಿಲ್ದಾಣ ಈ ಗಮ್ಯಸ್ಥಾನದ ಹತ್ತಿರದ ರೈಲು ನಿಲ್ದಾಣವಾಗಿದೆ. ರುದ್ರನಾಥ್ ಸ್ಥಳಕ್ಕೆ  ರಿಷಿಕೇಶ /ಹೃಷಿಕೇಶ, ಡೆಹ್ರಾಡೂನ್, ಕೋತ್ವಾರ ಮತ್ತು ಹರಿದ್ವಾರ ನಂತಹ ಹತ್ತಿರದ ಸ್ಥಳಗಳಿಂದ  ಸುಲಭವಾಗಿ ಬಸ್ ಸೌಲಭ್ಯವಿವೆ.

ಈ ಸುಂದರ ತಾಣವಾಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಆರಾಮದಾಯಕ ಮತ್ತು ಹಿತಕರವಾದ ಹವಾಮಾನವಿರುವ ಏಪ್ರಿಲ್ ನಿಂದ ನವೆಂಬರ್ ತಿಂಗಳ ಅವಧಿಗಳಾಗಿವೆ.

Please Wait while comments are loading...