Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರನಾಥ » ಹವಾಮಾನ

ರುದ್ರನಾಥ ಹವಾಮಾನ

ಪ್ರವಾಸಿಗರು ಏಪ್ರಿಲ್ ಮತ್ತು ನವೆಂಬರ್ ತಿಂಗಳುಗಳ ನಡುವೆ ರುದ್ರನಾಥ್ ಪ್ರದೇಶದಲ್ಲಿ ಹಿತಕರವಾದ ಹವಾಮಾನ ಪರಿಸ್ಥಿತಿಯಿರುವ ಕಾರಣ ಈ ತಾಣಕ್ಕೆ ಭೇಟಿ ಮಾಡಬಹುದು.

ಬೇಸಿಗೆಗಾಲ

(ಏಪ್ರಿಲ್ ನಿಂದ ಆಗಸ್ಟ್): ರುದ್ರನಾಥ್ ನ ಬೇಸಿಗೆಯ ಋತುವು ಏಪ್ರಿಲ್ ಮತ್ತು ಆಗಸ್ಟ್ ತಿಂಗಳುಗಳ ನಡುವೆ ವಿಸ್ತರಿಸುತ್ತದೆ. ಈ ಸಮಯದಲ್ಲಿ ಈ ಸ್ಥಳದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 17 ಡಿ.ಸೆ ಮತ್ತು 13 ಡಿ.ಸೆ ದಾಖಲಾಗುತ್ತದೆ. ಈ ಸ್ಥಳಗಳನ್ನು ನೋಡಲು ಈ ಅವಧಿಯು ಸೂಕ್ತವಾದ ಸಮಯ.

ಮಳೆಗಾಲ

(ಸೆಪ್ಟೆಂಬರ್ ನಿಂದ ನವೆಂಬರ್): ರುದ್ರನಾಥ ಪ್ರದೇಶದಲ್ಲಿ ಮಳೆಗಾಲವು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ ನವೆಂಬರ್ ತಿಂಗಳ ತನಕ ಮುಂದುವರೆಯುತ್ತದೆ. ಈ ಸಮಯದಲ್ಲಿ ಕಡಿಮೆ ಮಳೆಯಾಗುತ್ತದೆ. ಈ ಅವಧಿಯಲ್ಲಿ ಇಲ್ಲಿನ ಸೌಂದರ್ಯ ಅವರ್ಣನೀಯ!

ಚಳಿಗಾಲ

(ಡಿಸೆಂಬರ್ ನಿಂದ ಮಾರ್ಚ್) : ರುದ್ರನಾಥ ಪ್ರದೇಶದಲ್ಲಿ ಚಳಿಗಾಲವು ಡಿಸೆಂಬರ್ ಮತ್ತು ಮಾರ್ಚ್ ತಿಂಗಳ ನಡುವೆ ವಿಸ್ತರಿಸಿರುತ್ತದೆ. ಹವಾಮಾನವು ಅತೀ ಚಳಿಯನ್ನು ಹೊಂದಿದ್ದು ಕನಿಷ್ಠ ತಾಪಮಾನವು ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಈ ಸಮಯದಲ್ಲಿ, ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿರುತ್ತದೆ.