ಓಂಕಾರಾನಂದ ಆಶ್ರಮವನ್ನು 1967 ರಲ್ಲಿ ಸ್ಥಾಪಿಸಲಾಗಿದ್ದು ಮನಿ-ಕೆ-ರೇತಿ ಹತ್ತಿರದಲ್ಲಿದೆ. ಗಂಗಾ ನದಿ ತಟದಲ್ಲಿದ್ದು ಲಕ್ಷ್ಮಣ ಝೂಲಾ ಮತ್ತು ಶಿವಾನಂದ ನಗರಕ್ಕೆ ಸಮೀಪದಲ್ಲಿದೆ. ಈ ಆಶ್ರಮವನ್ನು ಸ್ಥಾಪಿಸಿದ್ದು ಎಚ.ಡಿ. ಪರಮಹಂಸ ಓಂಕಾರಾನಂದ ಸರಸ್ವತಿ ಒಬ್ಬ ತತ್ವಜ್ನಾನಿ ಮತ್ತು ಬರಹಗಾರ.
ಓಂಕಾರಾನಂದರ ಎಲ್ಲ ಆಶ್ರಮಗಳು ದೇವಸ್ಥಾನದ ರೂಪದಲ್ಲಿದ್ದು, ಭಕ್ತರು ಇಲ್ಲಿ ಪ್ರಾರ್ಥನೆ ಮತ್ತು ಭಜನೆ ಹಾಡುತ್ತಾರೆ. ಧ್ಯಾನ ಮತ್ತು ಯಜ್ನಗಳನ್ನು ನೆರವೇರಿಸುತ್ತಾರೆ. ಓಂಕಾರಾನಂದ ಧರ್ಮ ಸಂಸ್ಥಾನ, ಓಂಕಾರಾನಂದ ಚಾರಿಟೇಬಲ್ ಟ್ರಸ್ಟ್ ಮತ್ತು ಓಂಕಾರಾನಂದ ಶಿಕ್ಷಣ ಸೊಸೈಟಿಗಳನ್ನು ನಡೆಸಲಾಗುತ್ತದೆ. ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕ್ರತಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆಶ್ರಮ ಕೆಲಸ ಮಾಡುತ್ತದೆ. ಆಶ್ರಮದ ತರಗತಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನೂ ಕಲಿಯಬಹುದು.


Click it and Unblock the Notifications