ಕುಂಜಪುರಿ ದೇವಸ್ಥಾನ ರಿಷಿಕೇಶದಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಶಿವಾಲಿಕದ 13 ಮುಖ್ಯ ದೇವತೆಗಳಲ್ಲಿ ಒಂದಾದ ಕುಂಜಾಪುರಿಗೆ ಇಲ್ಲಿ ಪೂಜೆ ನಡೆಯುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳನ್ನು ಈ ಪ್ರದೇಶದಿಂದ ಕಾಣಬಹುದಾಗಿದೆ. ಹಿಮಾಲಯ ಪರ್ವತ ಶ್ರೇಣಿಗಳ ನೋಟ, ಚೌಕಂಬ, ಸ್ವರ್ಗ ರೋಹಿಣಿ, ಗಂಗೋತ್ರಿಗಳೂ ಇದರಲ್ಲಿ ಸೇರಿವೆ. ಪೌರಾಣಿಕ ಹಿನ್ನಿಲೆಯ ಅನ್ವಯ, ಒಮ್ಮೆ ದಕ್ಷ ರಾಜನು ತನ್ನ ಮಗಳಾದ ಸತಿಯ ಪತಿ ಪರಮೇಶ್ವರನನ್ನು ಅವಮಾನಿಸಿದಾಗ, ಅದನ್ನು ತಡೆಯಲಾರದೆ ಸತಿಯು ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ. ಇದರಿಂದ ದುಖಭರಿತನಾದ ಶಿವನು ಅವಳ ದೇಹವನ್ನು ಕೈಲಾಸಕ್ಕೆ ಕೊಂಡೊಯ್ಯುವಾಗ ಅವಳ ದೇಹವು ಭಾಗಗಳಾಗಿ ಭೂಮಿಗೆ ಬೀಳುತ್ತವೆ.
ಪ್ರಸ್ತುತ ಕಟ್ಟಲಾಗಿರುವ ಈ ದೇವಾಲಯವು ಸತಿಯ ದೇಹದ ಮೇಲ್ಭಾಗವು ಬಿದ್ದ ಸ್ಥಳವಾಗಿದೆ.


Click it and Unblock the Notifications