ರತ್ನಾಗಿರಿ ನಗರದ ಅಂಚಿಗೆ ಹಾಸಿಕೊಂಡಿರುವ ಮಾಂಡವಿ ಸಮುದ್ರ ತೀರ ವಿಶಾಲವಾಗಿದ್ದು ನೋಡಲು ಮೋಹಕವಾಗಿ ಕಾಣುತ್ತದೆ. ಈ ಸಮುದ್ರ ತೀರವು ರತ್ನಾಗಿರಿಯ ವಿಮಾನ ನಿಲ್ದಾಣಕ್ಕೂ ಹಾಗೂ ಅರಬ್ಬಿ ಸಮುದ್ರದ ದಕ್ಷಿಣ ಭಾಗದವರೆಗೂ ಹಬ್ಬಿದೆ.
ಈ ಸಮುದ್ರ ತೀರದಲ್ಲಿ ಕಪ್ಪು ಬಣ್ಣದ ಮರಳು ಇರುವುದರಿಂದ ಇದನ್ನು ಸ್ಥಳೀಯವಾಗಿ ಕಪ್ಪು ಸಮುದ್ರ ಅಥವಾ 'ಬ್ಲ್ಯಾಕ್ ಸೀ' ಎಂದೂ ಕರೆಯುತ್ತಾರೆ. ಇದು ರತ್ನಾಗಿರಿಗೆ ಹೆಸರಾಂತ ಮಹಾದ್ವಾರವೂ(ಗೇಟ್ ವೇ)ಆಗಿದೆ.
ಮಾಂಡವಿ ಬೀಚ್ ಅತ್ಯಂತ ಆಕರ್ಷಕವಾಗಿದ್ದು, ಇಲ್ಲಿನ ಜಲ ಕ್ರೀಡೆ ಹಾಗೂ ಬೋಟಿಂಗ್ ಪ್ರವಾಸಿಗರ ಮೆಚ್ಚುಗೆ ಪಡೆದಿದೆ. ನೈಸರ್ಗಿಕ ಸೌಂದರ್ಯವನ್ನು ಇಷ್ಟಪಡುವವರು ಇಲ್ಲಿಗೆ ಭೇಟಿ ನೀಡದರೆ ಖಂಡಿತ ಸಂತೋಷ ಪಡುತ್ತಾರೆ.


Click it and Unblock the Notifications