ರಾನಿಖೇತ್ ನಿಂದ 10 ಕಿ.ಮೀ ದೂರದಲ್ಲಿರುವ ಚೌಬಟಿಯಾ ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಹಚ್ಚ ಹಸಿರಿನಿಂದ ಕೂಡಿದ್ದು 200 ಕ್ಕಿಂತಲೂ ಹೆಚ್ಚಿನ ಬಗೆಯ ಹೂವು ಮತ್ತು ಹಣ್ಣುಗಳನ್ನು ಹೊಂದಿದೆ. ಇಲ್ಲಿ ಸೇಬು, ಪೀಚ್ ಹಣ್ಣು ಮತ್ತು ಆಪ್ರಿಕೋಟ್ ಗಳು ಇಲ್ಲಿ ಸಿಗುವ ಕೆಲವು ಹಣ್ಣುಗಳಾಗಿವೆ. ಸುತ್ತಲೂ ಓಕ್, ರೊಡೋಡೆಂಡ್ರಾನ್, ಸಿಪ್ರಸ್, ಸೆಡಾರ್ ಮತ್ತು ಪೈನ್ ಮರಗಳಿಂದ ಆವೃತವಾದ ಇದು ಅತ್ಯದ್ಭುತ ಸೌಂದರ್ಯದ ಖನಿಯಾಗಿದೆ. ಸರಕಾರಿ ಸೇಬು ಉದ್ಯಾನ ಮತ್ತು ಹಣ್ಣುಗಳ ಸಂಶೋಧನಾ ಕೇಂದ್ರ ಇಲ್ಲೇ ಸಮೀಪದಲ್ಲಿ ಇವೆ. ಇದು ಪಿಕ್ ನಿಕ್ ಇಷ್ಟಪಡುವವರಿಗೂ ಉತ್ತಮವಾದ ಸ್ಥಳವಾಗಿದೆ. ಇದರ ಜೊತೆಗೆ ಹಿಮಾಲಯದ ಅತ್ಯುತ್ತಮ ದೃಶ್ಯಗಳಿಗೂ ಇದು ಸಾಕ್ಷಿಯಾಗಿದೆ.


Click it and Unblock the Notifications