Search
  • Follow NativePlanet
Share
ಮುಖಪುಟ » ಸ್ಥಳಗಳು » ರಜ್ನಾಂದಗಾವ್ » ಆಕರ್ಷಣೆಗಳು » ದೊಂಗಾರಗಡ್

ದೊಂಗಾರಗಡ್, ರಜ್ನಾಂದಗಾವ್

2

ದೊಂಗಾರಗಡ್ ದ ಮಾತಾ ಬಂಲೇಶ್ವರಿ ದೇವಾಲಯವು ಧಾರ್ಮಿಕ ಕ್ಷೇತ್ರವೊಂದೇ ಅಲ್ಲದೇ ತನ್ನ ಸುತ್ತಣ ಪಾರಿಸರಿಕ ಸೌಂದರ್ಯದಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ರಾಜ್ನಾಂದಗಾವ್ ನಿಂದ 35 ಕಿ.ಮಿ , ದುರ್ಗ ದಿಂದ 67ಕಿ.ಮೀ ಮತ್ತು ರಾಯಪುರದಿಂದ 107ಕಿ.ಮೀ ದೂರವಿರುವ  ದೊಂಗಾರಗಡ್ ಸೌಂದರ್ಯದಲ್ಲಿ ಇಲ್ಲಿಯ ಪರ್ವತಗಳು ಮತ್ತು ಸರೋವರಗಳದ್ದೂ ವಿಶೇಷ ಪಾತ್ರವಿದೆ.

ಮಾತಾ ಬಂಲೇಶ್ವರಿ ದೇವಿ ದೇವಸ್ಥಾನವು  ಬೆಟ್ಟದ ತುದಿಯಲ್ಲಿ 1600 ಅಡಿ ಎತ್ತರದಲ್ಲಿದೆ. ದೇವಾಲಯವು ಪುರಾಣಕಾಲದ್ದಾಗಿದ್ದು, ಇದು ಆಧ್ಯಾತ್ಮಿಕವಾಗಿ ಬಹಳಪ್ರಾಮುಖ್ಯತೆ ಪಡೆದಿದೆ.  ಛೋಟಿ ಬಂಲೇಶ್ವರಿ ದೇವಸ್ಥಾನವು ಇನ್ನೊಂದು ಪ್ರಮುಖ ದೇವಾಲಯವಾಗಿದ್ದು,ಇದು ಬೆಟ್ಟದ ಕೆಳಭಾಗದಲ್ಲಿದೆ . ಭಕ್ತರು ನವರಾತ್ರಿ ಸಂದರ್ಭದಲ್ಲಿ ಇಲ್ಲಿಗೆ ಬಂದು ದೇವಿಕೃಪೆಗೆ ಪಾತ್ರರಾಗುವರು. ಈ ದೇವಾಲಯದ ಸಮೀಪದಲ್ಲೇ ಶಿವ ಮತ್ತು ಹನುಮಾನ್ ದೇವಾಲಯ ಕೂಡ ಇವೆ.  ನವರಾತ್ರಿಯ ಸಂದರ್ಭದಲ್ಲಿ ಜ್ಯೋತಿ ಕಲಶ್ ಎಂಬ ಸಾಂಪ್ರದಾಯಿಕ ದೀವಿಗೆಯನ್ನು ಬೆಳಗುವರು.  

ದೇವಾಲಯಗಳಲ್ಲದೇ  ದೊಂಗರ್ಗಹದಲ್ಲಿಯ ರೋಪ್ ವೇ ಇರುವುದು ಮತ್ತೊಂದು ಆಕರ್ಷಣೆಯಾಗಿದೆ. ಇದು ಛತ್ತೀಸ್ಗಢದಲ್ಲಿರುವ  ಯಾತ್ರಿಗಳು ಪ್ರಯಾಣಿಸಬಲ್ಲ ಏಕಮಾತ್ರ ರೋಪ್ ವೇ ಆಗಿದೆ. ಭಗವಾನ್ ಚಂದ್ರಪ್ರಭುಜಿ ತೀರ್ಥಕರ  ಪ್ರಾಚೀನ ಪ್ರತಿಮೆಯು  ಚಂದ್ರಗಿರಿ ಬೆಟ್ಟದಲ್ಲಿರುವದರಿಂದ ಇಲ್ಲಿ ಒಂದು ಜೈನ ದೇವಾಲಯದ ನಿರ್ಮಿಸುವ ಯೋಜನೆ ಇದೆ.

ದೊಂಗಾರಗಡ್ ದಿಂದ 110 ಕಿ.ಮಿ ದೂರದ ರಾಯ್ಪುರ ವಾಯುನೆಲೆ, ದೊಂಗಾರಗಡ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ದೊಂಗಾರಗಡ್ ನಲ್ಲೇ ರೈಲ್ವೇ ನಿಲ್ದಾಣವಿದ್ದು, ಇತರ ನಗರಗಳೊಂದಿಗೆ ಸಂಪರ್ಕ ಪಡೆದಿದೆ.  ಬಸ್ ಮತ್ತು ಖಾಸಗಿ ಟ್ಯಾಕ್ಸಿಗಳು ರಸ್ತೆ ಸಂವಹನವನ್ನು ಉತ್ತಮಗೊಲಿಸಿದ್ದು, ಕೊಲ್ಕತ್ತಾ - ಮುಂಬೈ ರಾಷ್ಟ್ರೀಯ ಹೆದ್ದಾರಿ (NH6)ಯು   ಹಸಿರಿನ ಸೌಮ್ಯ ಕಾಡಿನೊಳಕ್ಕೆ ಹಾಯ್ದು ಹೋಗುತ್ತದೆ. ಪ್ರವಾಸಿಗರು ವರ್ಷದ ಎಲ್ಲಾ ಕಾಲದಲ್ಲಿಯೂ ಈ ಸ್ಥಳಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat