Search
  • Follow NativePlanet
Share
ಮುಖಪುಟ » ಸ್ಥಳಗಳು » ರಜ್ನಾಂದಗಾವ್ » ಆಕರ್ಷಣೆಗಳು » ಬಿರ್ಖಾ

ಬಿರ್ಖಾ, ರಜ್ನಾಂದಗಾವ್

1

ಛತ್ತೀಸ್ಗಢದ ರಾಜ್ನಾಂದಗಾವ್ ಜಿಲ್ಲೆಯ ಧಾರ್ಮಿಕ ತಾಣಗಳಲ್ಲೊಂದು ಈ ಬಿರ್ಖಾ. ಇಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರುವ  ಶಿಲೆಯಿಂದ ನಿರ್ಮಿತವಾದ  ಶಿವನ ದೇವಾಲಯವಿದೆ. ಇದು ಗಂದಿ ತೆಹ್ಸಿಲ್ ರಿಂದ 3ಕಿ.ಮಿ ದೂರದಲ್ಲಿದ್ದು ಹತ್ತಿರದ ಬೆಟ್ಟಗಳಿಂದ ಮೋಹಕವಾಗಿ ಕಂಗೊಳಿಸುತ್ತದೆ.

ಭಾಗಶಃ ದೇವಾಲಯ ಪಾಳುಬಿದ್ದಿದೆಯಾದರೂ, ಮುಖ್ಯ ದೇವಾಲಯದಲ್ಲಿ ಇನ್ನೂ ಗರ್ಭಗೃಹ ಮತ್ತು ಮುಖಮಂಟಪಗಳು ಸುಸ್ಥಿತಿಯಲ್ಲಿವೆ. ಈ ದೇಗುಲದ ಶಿವ ಲಿಂಗವು ಯೋನಿಪೀಠದಲ್ಲಿರಿಸಿದ್ದು ಇದು ಗರ್ಭಗೃಹದಲ್ಲಿದೆ.  ದೇವಾಲಯದ ಪ್ರವೇಶದ್ವಾರ ವಿಶೇಷವಾಗಿ ಬಾಗಿಲ ಚೌಕಟ್ಟುಗಳನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ದ್ವಾರಪಾಲಕನಂತೆ ನಿಂತಿರುವ  ಶಿವನ ಹಿನ್ನೆಲೆಯಲ್ಲಿ ಘಟ-ಪಲ್ಲವರ ವಿಶಿಷ್ಟ ವಿನ್ಯಾಸವಿದೆ.

ದೇವಾಲಯದ ಆವರಣದಲ್ಲಿ  ಭೈರವ ನಂದಿ ಮತ್ತು ಗಣೇಶ ಶಿಲ್ಪಗಳಿದ್ದು ಇಂದಿಗೂ  ಭಕ್ತರಿಂದ  ಪೂಜಿಸಲ್ಪಡುತ್ತಿವೆ. ಅತ್ಯುತ್ತಮ ವಾಸ್ತುಶಿಲ್ಪ ಎಂದು ಪರಿಗಣಿಸಲಾಗುವ ಈ ದೇವಾಲಯವು ನಾಗವಂಶಿ ಆಡಳಿತಗಾರರಿಂದ  10 ನೇ -11 ನೇ ಶತಮಾನದಲ್ಲಿ  ಕಟ್ಟಲಾಗಿತ್ತೆಂದು ಹೇಳಲಾಗುತ್ತದೆ. ಇದು ಅಂದಿನ ಅವಧಿಯಲ್ಲಿದ್ದ ಪ್ರಾದೇಶಿಕ ದೇವಾಲಯಗಳಲ್ಲಿರುತ್ತಿದ್ದ  ಕಲೆಯ ಉತ್ಕೃಷ್ಟತೆಯನ್ನು ಬಿಂಬಿಸುತ್ತದೆ..

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun