ಹಿಂಗೊಲ್ಗಢ್ ವನ್ಯಜೀವಿ ಪ್ರಿಯರಿಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ. ಇದರೊಳಗೆ ಇರುವ ಆಕರ್ಷಕ ಪ್ರಕೃತಿ ಶಿಕ್ಷಣ ಅಭಯಾರಣ್ಯಕ್ಕೆ ಇದು ತುಂಬಾ ಹೆಸರುವಾಸಿ. ಹಲವಾರು ವಿಧದ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ಹೊಂದಿರುವ ಈ ಅಭಯಾರಣ್ಯ. 1984ರಲ್ಲಿ ಇದನ್ನು ಪರಿಸರ ಶಿಕ್ಷಣ ಕೇಂದ್ರ ಎಂದು ಘೋಷಿಸಲಾಯಿತು ಮತ್ತು ಗುಜರಾತ್ ಪರಿಸರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಮೂಲಕ ಹಿಂಗೊಲ್ಗಢ್ ಪ್ರಕೃತಿ ಶಿಕ್ಷಣ ಅಭಯಾರಣ್ಯವೆಂದು ಹೆಸರಿಸಲ್ಪಟ್ಟಿದೆ. ಅಳಿವಿನಂಚಿನಲ್ಲಿರುವ ಚಿಂಕಾರ, ತೋಳ, ನೀಲಿಗೂಳಿ, ಮುಳ್ಳುಹಂದಿ ಮತ್ತು ಹಾರುವ ನರಿಗಳಂತಹ ಪ್ರಾಣಿಗಳು ಮತ್ತು ಸರೀಸೃಪಗಳಿಗೆ ಇದು ನೆಲೆಯಾಗಿದೆ. ಪಾರಿವಾಳ, ಬುಲ್ ಬುಲ್ ಮತ್ತು ಮರಕುಟಿಗದಂತಹ ಹಲವಾರು ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು.


Click it and Unblock the Notifications