Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಕೋಟ್ » ಹವಾಮಾನ

ರಾಜಕೋಟ್ ಹವಾಮಾನ

ಬೇಸಿಗೆ ಮತ್ತು ಮಳೆಗಾಲದಲ್ಲಿ ರಾಜ್ ಕೋಟ್ ಭೇಟಿಗೆ ಯೋಗ್ಯವಲ್ಲ. ಯಾಕೆಂದರೆ ಈ ತಿಂಗಳುಗಳು ತುಂಬಾ ಅನನುಕೂಲವಾಗಿರುತ್ತದೆ. ಚಳಿಗಾಲವು ಹಿತಕರ ಹಾಗೂ ತಂಪಾಗಿರುತ್ತದೆ. ಇದು ಪ್ರವಾಸಕ್ಕೆ ಯೋಗ್ಯ ತಿಂಗಳು.

ಬೇಸಿಗೆಗಾಲ

ರಾಜ್ ಕೋಟ್ ನ ಬೇಸಿಗೆ ಕಾಲ ತುಂಬಾ ಉಷ್ಣತೆ ಮತ್ತು ಶುಷ್ಕವಾಗಿರುತ್ತದೆ. ಬೇಸಿಗೆಕಾಲವು ಮಾರ್ಚ್ ಮಧ್ಯದಿಂದ ಜೂನ್ ಮಧ್ಯಭಾಗದವರೆಗೆ ಇರುತ್ತದೆ. ಈ ಸಮಯದಲ್ಲಿ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ನಿಂದ 42 ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ.

ಮಳೆಗಾಲ

ಚಂಡಮಾರುತ ಮತ್ತು ಚಂಡಮಾರುತದ ಮಳೆಯಿಂದಾಗಿ ಮಳೆಗಾಲವು ತುಂಬಾ ಅವ್ಯವಸ್ಥಿತವಾಗಿರುತ್ತದೆ. ಅರೇಬಿಯನ್ ಸಮುದ್ರಕ್ಕೆ ತುಂಬಾ ಹತ್ತಿರವಾಗಿರುವ ಕಾರಣ ನಗರವು ಭಾರೀ ಮಳೆ ಮತ್ತು ಬಿರುಗಾಳಿ ಹವಾಮಾನವಿರುತ್ತದೆ. ಜೂನ್ ಮತ್ತು ಜುಲೈಯಲ್ಲಿ ಇಲ್ಲಿ ಬಿರುಗಾಳಿ ಸಾಮಾನ್ಯ. ಮಳೆಗಾಲದ ಇತರ ತಿಂಗಳುಗಳಿಗೆ ಹೋಲಿಸಿದರೆ ಈ ಎರಡು ತಿಂಗಳಲ್ಲಿ ಮಳೆ ಕಡಿಮೆಯಿರುತ್ತದೆ. ಮಳೆಗಾಲದಲ್ಲಿ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ನಿಂದ 37 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ.

ಚಳಿಗಾಲ

ಚಳಿಗಾಲವು ಸಾಮಾನ್ಯವಾಗಿ ಲಘು ಮತ್ತು ಸ್ವಲ್ಪ ಆರ್ದ್ರತೆಯಿಂದ ಕೂಡಿರುತ್ತದೆ. ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ನಿಂದ 22 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಚಳಿಗಾಲವು ತುಂಬಾ ಹಿತಕರವಾಗಿರುತ್ತದೆ.