ಲಿಡ್ಡರ್ ವಾಟ್ ಪಹಲ್ಗಾಂನಿಂದ 22 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ದಟ್ಟ ಅರಣ್ಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಾವಲುಗಳಿಂದ ಕೂಡಿದ್ದು ಸುಂದರವಾಗಿ ಕಾಣುತ್ತದೆ. ಸಮುದ್ರ ಮಟ್ಟದಿಂದ 3408 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವು ಪ್ರವಾಸಿಗರಿಗೆ ಶಿಬಿರವನ್ನು ಹಾಕಲು ಹೇಳಿ ಮಾಡಿಸಿದ ತಾಣವಾಗಿದೆ. ಸಾಹಸ ಮನೋಭಾವದವರು ಇಲ್ಲಿಂದ ಕೊಲಹೊಯ್ ಹಿಮನದಿಗೆ ಮತ್ತು ತರ್ಸರ್ ಮತ್ತು ಮರ್ಸರ್ ಕೆರೆಗಳಿಗೆ ಚಾರಣವನ್ನು ಕೈಗೊಳ್ಳಬಹುದು. ಈ ಸ್ಥಳವು ಸಿಂಧ್ ಕಣಿವೆಯ ಮುಖಾಂತರ ಸಾಗುವ ಚಾರಣದ ಹಾದಿಯಲ್ಲಿ ಕಾಣಸಿಗುತ್ತದೆ. ಪ್ರವಾಸಿಗರು ಪಹಲ್ಗಾಂನಿಂದ ಇಲ್ಲಿಗೆ ಕ್ಯಾಬ್‍ಗಳ ಮೂಲಕ ಅಥವಾ ಕುದುರೆಗಳ ಮೂಲಕ ತಲುಪಬಹುದು.


Click it and Unblock the Notifications