ಪಚಮಡಿಯ ಅತಿ ದೊಡ್ಡ ಜಲಪಾತ ಇದಾಗಿದೆ. ಈ ನೀರಿಗೆ ಸೂರ್ಯನ ಕಿರಣಗಳು ಬಿದ್ದಾಗ ಬೆಳ್ಳಿಯಂತೆ ಕಾಣುವುದರಿಂದ ಇದನ್ನು ರಜತ ಜಲಪಾತ ಎಂಬ ಹೆಸರಿನಿಂದ ಕರೆಯುತ್ತಾರೆ. ರಜತ ಪ್ರಪಾತ ಎಂದರೆ ಸಿಲ್ವರ್ ವಾಟರ್ ಫಾಲ್ಸ್ ಎಂತರ್ಥ, ರಜತ ಎಂದರೆ ಬೆಳ್ಳಿ, ಪ್ರಪಾತ ಎಂದರೆ ಜಲಪಾತ. ಇದು 107 ಮೀಟರ್ ನ ಏಕ ಜಲಪಾತವಾಗಿದೆ. ಇದು ಕುದುರೆ ಬಾಲದ ಆಕಾರದಲ್ಲಿದೆ. ಇದು ಭಾರತದ 30 ನೆ ಎತ್ತರದ ಜಲಪಾತವಾಗಿದೆ. ಅಪ್ಸರ ವಿಹಾರದಿಂದ ಕೇವಲ 10 ನಿಮಿಷ ನಡುಗೆಯಲ್ಲಿ ಈ ಜಲಪಾತ ಸಿಗುತ್ತದೆ.