ಅಪ್ಸರಾ ಜಲಪಾತ ಸಣ್ಣ ಜಲಪಾತ ಮತ್ತು ಕೆಳಗೆ ಒಂದು ಸಣ್ಣ ಕೊಳವನ್ನು ಹೊಂದಿರುವ ಸುಂದರ ಸ್ಥಳ. ಇದನ್ನು ಗಂಧರ್ವ ಕೊಳ ಎಂದೂ ಕೂಡ ಕರೆಯಲಾಗುತ್ತದೆ. ಇದು ನೈಸರ್ಗಿಕ ಸ್ನಾನ, ಈಜುವಿಕೆಗೆ ಸೂಕ್ತ ಸ್ಥಳ. ಈ ಕೊಳ ಹೆಚ್ಚು ಆಳವಿಲ್ಲ, ಆದ್ದರಿಂದ ಕುಟುಂಬ ಸಮೇತ ಮಕ್ಕಳ ಜೊತೆ ಆಡಲು, ಸಮಯ ಕಳೆಯಲು ಈ ಸ್ಥಳ ಸೂಕ್ತವಾಗಿದೆ. ಈ ಕೊಳ ಪಾಂಡವ ಗುಹೆಯ ಹತ್ತಿರದಲ್ಲೆ ಇದೆ.
ಇದರ ಹಿಂದಿನ ಕಥೆ ಕೂಡ ಸುಂದರವಾಗಿದೆ. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಅವರ ಹೆಂಡತಿಯರು ಇಲ್ಲಿ ಸ್ನಾನ ಮಾಡಲು ಬರುತ್ತಿದ್ದರು. ಈ ದೃಶ್ಯವನ್ನು ಮರೆಯಿಂದ ನೋಡುತ್ತಿದ್ದ ಸ್ಥಳೀಯರು ಅವರ ಸುಂದರ ಮೈಕಾಂತಿಯನ್ನು ನೋಡಿ, ಮೂಕವಿಸ್ಮಿತರಾಗಿ ಅವರನ್ನು ದೇವಕನ್ಯೆಯರೆಂದೇ ಹೇಳುತ್ತಿದ್ದರು. ಆದ್ದರಿಂದ ಇದು ಗಂಧರ್ವ ಕೊಳ ಎಂಬ ಹೆಸರು ಪಡೆಯಿತು. ಪಚಮಡಿಗೆ ಹೋದವರು ಇಲ್ಲಿ ಭೇಟಿ ನೀಡಲೇಬೇಕು. ಇಲ್ಲಿ ಸ್ನಾನ ಮಾಡುವುದೇ ಒಂದು ಆಹ್ಲಾದಕರ ಅನುಭವ.


Click it and Unblock the Notifications