ನಿಜಾಮ್ ಸಾಗರ್ ಅಣೆಕಟ್ಟನ್ನು ಗೋದಾವರಿ ನದಿಯ ಒಂದು ಉಪನದಿಯಾದ ಮಂಜಿರಾ ನದಿಯ ಮೇಲೆ ನಿಜಾಮಾಬಾದ್ ಜಿಲ್ಲೆಯಲ್ಲಿ ಕಟ್ಟಲಾಗಿದೆ. ಇದು ಹೈದರಾಬಾದ್ ನಿಂದ ವಾಯುವ್ಯಕ್ಕೆ ಇದ್ದು ಸುಮಾರು 145 ಕಿ.ಮೀ ದೂರದಲ್ಲಿದೆ. ಇದು ನಿಜಾಮಾಬದ್ ಜಿಲ್ಲೆಯಲ್ಲೇ ಬರುವ ಅಚಾಮ್ ಪೇಟ್ ಮತ್ತು ಬಂಜಪಲ್ಲೆ ನಗರಗಳ ನಡುವೆ ಇದೆ.
ಇದು ಎರಡು ನಗರಗಳ ನಡುವೆ ಇದ್ದು ಸುಮಾರು 3 ಕಿ.ಮೀ ಉದ್ದವಿದೆ ಮತ್ತು ಸಾಕಷ್ಟು ಭೂಪ್ರದೇಶವನ್ನು ಒಳಗೊಂಡಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ಬರುವ ವಿವಿಧ ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆ ಒದಗಿಸುವ ಕಾರಣದಿಂದ ಈ ಅಣೆಕಟ್ಟನ್ನು ಕಟ್ಟಲಾಗಿದೆ.
ಇಂದು ಈ ಅಣೆಕಟ್ಟಿನ ಮೇಲೆ ಕಟ್ಟಿರುವ 14 ಫೀಟು ಅಗಲದ ಅತ್ಯಾಕರ್ಷಕ ರಸ್ತೆಯ ಕಾರಣದಿಂದ ಇದು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ಮೂಲಕ ಅಣೆಕಟ್ಟಿನ ಸುಂದರವಾದ, ನಯನ ಮನೋಹರ ಸೌಂದರ್ಯವನ್ನು ಸವಿಯಬಹುದಾಗಿದೆ.


Click it and Unblock the Notifications