Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಹವಾಮಾನ

ನಿಜಾಮಾಬಾದ್ ಹವಾಮಾನ

ನಿಜಾಮಾಬಾದ್ ಭೇಟಿ ನಿಡುವವರಿಗೆ ಉತ್ತಮವಾದ ಕಾಲವೆಂದರೆ ಚಳಿಗಾಲ. ಉಷ್ಣಾಂಶ ಸಾಕಷ್ಟು ಕಡಿಮೆಯಾಗಿಲ್ಲದಿದ್ದರೂ ಸುತ್ತಾಡಲು ಮತ್ತು ಪ್ರಯಾಣಕ್ಕೆ ತೊಂದರೆ ನೀಡದ ಹವಾಮಾನ ಈ ಅವಧಿಯಲ್ಲಿರುತ್ತದೆ. ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ನೀವು ನಿಮ್ಮ ಭೇಟಿಯನ್ನು ನೀಡಬಹುದಾಗಿದೆ. ಆದರೆ ಪ್ರವಾಸಿಗರು ತಮ್ಮೊಂದಿಗೆ ಉಣ್ಣೆಯ ಬಟ್ಟೆಯನ್ನು ತೆಗೆದುಕೊಂಡು ಹೋಗುವುದು ಸೂಕ್ತವಾಗಿದೆ ಯಾಕೆಂದರೆ ರಾತ್ರಿಯ ಹೊತ್ತು ಚಳಿ ಸ್ವಲ್ಪ ಜಾಸ್ತಿಯಾಗಿರುತ್ತದೆ.

ಬೇಸಿಗೆಗಾಲ

ನಿಜಾಮಾಬಾದ್ ನಲ್ಲಿ ಬೇಸಿಗೆ ಸಾಕಷ್ಟು ಬಿಸಿ, ಆದ್ರ ಮತ್ತು ಒಣಹವೆಯಿಂದ ಕೂಡಿರುತ್ತದೆ. ಫೆಬ್ರುವರಿ ಅಂತ್ಯದಲ್ಲಿ ಪ್ರಾರಂಭವಾಗುವ ಬೇಸಿಗೆಯು ಜೂನ್ ಕೊನೆಯವರೆಗೂ ಇರುತ್ತದೆ. ಮೇ ಮತ್ತು ಜೂನ್ ವರ್ಷದ ಅತಿ ಶಾಖಮಯ ತಿಂಗಳುಗಳಾಗಿವೆ. ತಾಪಮಾನವು 45 ಡಿಗ್ರಿ ಸೆಲ್ಶಿಯಸ್ ವರೆಗೂ ತಲುಪುವುದರಿಂದ ಈ ಸಮಯವು ಇಲ್ಲಿಗೆ ಭೇಟಿ ನೀಡಲು ಅಷ್ಟೊಂದು ಸೂಕ್ತವಲ್ಲವೆಂದೆ ಹೇಳಬಹುದು.

ಮಳೆಗಾಲ

ಜೂನ್ ಅಂತ್ಯದ ವೇಳೆಗೆ ನಿಜಾಮಾಬಾದ್ ನಗರದಲ್ಲಿ ಆರಂಭವಾಗುವ ಮಳೆಗಾಲ ಜುಲೈ ಮತ್ತು ಆಗಸ್ಟ್ ನಾದ್ಯಂತ ಮುಂದುವರೆಯುತ್ತದೆ. ಈ ಭಾಗದಲ್ಲಿ ಸಾಮಾನ್ಯ ಮಳೆಯಾಗುತ್ತದೆ ಮತ್ತು ಉಷ್ಣತೆ 35 ಡಿಗ್ರಿ ಸೆಲ್ಶಿಯಸ್ ಗಳಷ್ಟು ಇರುತ್ತದೆ. ಆದರೆ ಉಷ್ಣತೆಯನ್ನು ಕಡಿಮೆ ಮಾಡಲು ಮಳೆ ಯಾವುದೇ ಕೊಡುಗೆಯನ್ನು ನೀಡುವುದಿಲ್ಲ ಬದಲಾಗಿ ಅವು ತೇವಾಂಶವನ್ನು ಮತ್ತೂ ಹೆಚ್ಚಿಸುತ್ತವೆ.

ಚಳಿಗಾಲ

ಉತ್ತರ ಭಾರತದಲ್ಲಿರುವ ಹಾಗೆಯೇ ನಿಜಾಮಾಬಾದ್ ಕೂಡ ಚಳಿಗಾಲವನ್ನು ಪಡೆದಿದೆ. ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಚಳಿಗಾಲವಿರುತ್ತದೆ. ಈ ತಿಂಗಳುಗಳಲ್ಲಿ ಜನವರಿ ತಿಂಗಳಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಾಗುತ್ತದೆ. ಈ ಸಮಯದಲ್ಲಿ ತಾಪಮಾನವು ಸಾಮಾನ್ಯವಾಗಿ 27 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆಯಾಗುವುದಿಲ್ಲ ಮತ್ತು 32 ಡಿಗ್ರಿ ಸೆಲ್ಶಿಯಸ್ ಗಿಂತ ಜಾಸ್ತಿಯಾಗುವುದಿಲ್ಲ.