ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ನೆಲೆಗೊಂಡಿರುವ ಎಲಂಬಲೈ ಪರ್ವತ ನಿಸರ್ಗ ಪ್ರೇಮಿಗಳಿಗೆ ಹಾಗೂ ವನ್ಯಜೀವಿ ಉತ್ಸಾಹಕರಿಗೆ ಜನಪ್ರಿಯ ತಾಣವಾಗಿದೆ. ನಿಲಂಬೂರ್ ಮೂಲಕ ಪ್ರವೇಶಿಸಬಹುದಾದ ಈ ಪರ್ವತದ ಕಣಿವೆಯಲ್ಲಿ ಚಲಿಯಾರ್ ನದಿಯ ಉಗಮ ಸ್ಥಾನವಾಗಿದೆ. ಬಿದಿರಿನ ಹಸಿರು ಇಡೀ ಕಾಡನ್ನು ಸುತ್ತುವರಿದಿರುವುದು ನೋಡುಗನ ಕಣ್ಣಿಗೆ ಹಬ್ಬವೇ ಸರಿ.
ಇದು ಆನೆ, ಜಿಂಕೆ, ನೀಲಿ ಕೋತಿ, ಕಾಡೆಮ್ಮೆ, ಕರಡಿ, ಕಾಡು ಬೆಕ್ಕು ಮತ್ತು ಕಾಡು ನಾಯಿಗಳು ಸೇರಿದಂತೆ ವಿವಿಧ ಬಗೆಯ ಪ್ರಾಣಿ ಸಂಕುಲವನ್ನು ಹೊಂದಿದೆ. ಈ ಸ್ಥಳ ವನ್ಯಜೀವಿ ಪ್ರಿಯರಿಗೆ ಅಧ್ಯಯನ ಮಾಡಲು ಯೋಗ್ಯ ಸ್ಥಳವಾಗಿದೆ. ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಉತ್ತಮ ಅವಕಾಶ ಕಲ್ಪಿಸುತ್ತದೆ. ಇದು ಕುಟುಂಬ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.


Click it and Unblock the Notifications