ಭದ್ವಾಮಾತ ದೇವಸ್ಥಾನವು ನೀಮಚ್ ನಿಂದ 18 ಕಿಲೋಮೀಟರು ಪೂರ್ವದಲ್ಲಿದೆ. ಅಮೃತಶಿಲೆಯಿಂದ ಕಟ್ಟಲಾಗಿರುವ ಮಹಾಮಾಯ ಭದ್ವಾಮಾತ ದೇವಸ್ಥಾನದಲ್ಲಿ, ಮಾತಾ ವಿಗ್ರಹದ ಸುತ್ತಲೂ, ಬ್ರಾಹ್ಮೀ, ಮಹೇಶ್ವರಿ, ಕುಮಾರಿ, ವೈಷ್ಣವಿ, ವಾರಾಹಿ, ನರ್ಸಿನ್ಹಿ, ಇಂದ್ರಿ, ಶಿವ್ದತ್ತಿ ಮತ್ತು ಚಾಮುಂಡ ಎಂಬ ನವದುರ್ಗೆಯರ ವಿಗ್ರಹಗಳಿವೆ. ಭಾರತದಲ್ಲಿನ ಶಕ್ತಿಗೆ ಸಂಬಂಧಿಸಿದ ಪ್ರಮುಖ ದೇವಸ್ಥಾನಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ.
ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಭಕ್ತಾದಿಗಳು ಶಾಂತಿ ಹಾಗೂ ಅಮೂರ್ತ ಆನಂದವನ್ನು ಹೊಂದುತ್ತಾರೆ. ಈ ದೇವಸ್ಥಾನದ ಆವರಣದಲ್ಲಿರುವ ಪವಿತ್ರ ಜಲವಾದ ಬಾವ್ದಿ ಯನ್ನು ಆರೋಗ್ಯ ತೀರ್ಥ ಎಂದು ಪರಿಗಣಿಸಲಾಗುತ್ತದೆ. ಈ ಕೊಳದಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ವಿಧದ ಚರ್ಮ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಪುರಾಣದ ಪ್ರಕಾರ, ಭದ್ವಾಮಾತ ಈ ದೇವಸ್ಥಾನದಲ್ಲಿ ನೆಲೆಸಿದ್ದು, ತನ್ನ ಭಕ್ತರನ್ನು ಅನುಗ್ರಹಿಸುತ್ತಾಳೆ ಎನ್ನಲಾಗಿದೆ. ದೇವಸ್ಥಾನದಲ್ಲಿ ಸಂಜೆಯ ವೇಳೆಯಲ್ಲಿ ನಡೆಯುವ ಆರತಿಯನ್ನು ನೋಡಿ ಇಲ್ಲಿಗೆ ಭೇಟಿ ನೀಡುವ ಭಕ್ತರು ವಿಸ್ಮಯಗೊಳ್ಳುತ್ತಾರೆ.


Click it and Unblock the Notifications