ಗುರುದ್ವಾರ ತಹ್ಲಿ ಸಾಹಿಬ್ ನವಾನಶಹರ್ ಅನ್ನು ಶ್ರೀ ಗುರು ನಾನಕ್ ದೇವ್ ಜೀಯವರ ಪುತ್ರನಾದ ಬಾಬಾ ಶ್ರೀ ಚಂದ್‍ನ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ರಹೊನ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನಂಬಿಕೆಗಳ ಪ್ರಕಾರ ಬಾಬಾ ಶೀ ಚಂದ್ ಇಲ್ಲಿ ಸುಮಾರು 40 ದಿನಗಳ ಕಾಲ ಧ್ಯಾನವನ್ನು ಮಾಡಿದರಂತೆ. ಇಲ್ಲಿ ಒಂದು ಹಳೆಯ ಕಾಲದ ಶೀಶಂ ಮರವಿದೆ (ತಹ್ಲಿ) ಇದನ್ನು ಬಾಬಾ ಶ್ರೀ ಚಂದ್ ಜೀಯವರು ನೆಟ್ಟರೆಂದು ಭಾವಿಸಲಾಗುತ್ತದೆ. ಇದು ನವಾನಶಹರದಿಂದ ಗಢ್‍ಶಂಕರಕ್ಕೆ ತೆರಳುವ ರಸ್ತೆಯಲ್ಲಿ ಒಂದು ಕಿಲೋ ಮೀಟರ್ ದೂರದಲ್ಲಿ ನೆಲೆಗೊಂಡಿದೆ.


Click it and Unblock the Notifications