ನಂದಿಬೆಟ್ಟಕ್ಕೆ ಹೊಂದಿರುವ ನಂದಿ ದೇವಾಲಯವು ಇಲ್ಲಿನ ಅತ್ಯಂತ ಗಮನಾರ್ಹ ಪುಣ್ಯಸ್ಥಳವೆಂದೇ ಹೇಳಬಹುದು. ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ದೇವಾಲಯವು ನಂದಿಬೆಟ್ಟದ ಕೆಳಸ್ಥರದಲ್ಲಿ ಇದೆ. ಈ ದೇವಾಲಯದಲ್ಲಿರುವ ಯೋಗ ನಂದೀಶ್ವರ ಮತ್ತು ಭೋಗನಂದೀಶ್ವರ ಮೂರ್ತಿಗಳು ಇಂದಿಗೂ ಪೂಜಿಸಲ್ಪಡುತ್ತ ಭಕ್ತರ ಇಷ್ಟಾರ್ಥ ಪೂರೈಸುತ್ತಿವೆ.ಈ ದೇವಾಲಯವನ್ನು ಹೊಯ್ಸಳ, ಬಾಣ, ಚೋಳರ ಮತ್ತು ವಿಜಯನಗರ ಅರಸರ ಆಳ್ವಿಕೆ ಸಮಯದಲ್ಲಿ ಕಟ್ಟಲಾಗಿದೆ ಎನ್ನಲಾಗಿದೆ. ವಿಶೇಷವಾದ ಲೋಹದ ಲೇಪನ ಮತ್ತು ಸುಂದರ ಕೆತ್ತನೆ ಹೊಂದಿರುವ ಕಂಬಗಳೊಂದಿಗೆ ದೇವಾಲಯ ಅತ್ಯಂತ ಸುಂದರವಾಗಿ ಕಾಣುತ್ತದೆ. ಈ ದೇವಸ್ಥಾನದ ಮುಂಭಾಗದಲ್ಲಿರುವ ಮುಂಭಾಗದಲ್ಲಿರುವ ದೀಪ ಕಂಬದಲ್ಲಿ ಇಂದಿಗೂ ದೀಪ ಹಚ್ಚಲಾಗುತ್ತದೆ.


Click it and Unblock the Notifications