ಪ್ರಾಣಿಸಂಗ್ರಹಾಲಯವು ಸಮುದ್ರ ಮಟ್ಟದಿಂದ 2100 ಮೀಟರ್ ಎತ್ತರದಲ್ಲಿದ್ದು ನೈನಿತಾಲ್ ನ ಒಂದು ಪ್ರವಾಸಿ ತಾಣವಾಗಿದೆ. ಇದು ನೈನಿತಾಲ್ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ಮೃಗಾಲಯವು ಹಿಮಾಲಯನ್ ಕಪ್ಪು ಕರಡಿ ಸೇರಿದಂತೆ ಕೋತಿಗಳು, ಸೈಬೀರಿಯನ್ ಹುಲಿಗಳು, ಚಿರತೆಗಳು, ತೋಳ, ಪಾಮ್ ಸಿವೆಟ್ ಬೆಕ್ಕು, ಉಂಗುರದ ಗಿಣಿಗಳು, ಗುಲಾಬಿ, ಬೆಳ್ಳಿ ಲಾವಗೆಗಳು, ಬೆಟ್ಟದ ನರಿಗಳು, ಜಿಂಕೆ ಮತ್ತು ಬಾರ್ಕಿಂಗ್ ಜಿಂಕೆಗಳು ಹೀಗೆ ಮೊದಲಾದ ಪ್ರಾಣೀಗಳ ನೆಲೆಯಾಗಿದೆ. ಈ ಪ್ರಾಣಿ ಸಂಗ್ರಹಾಲಯವು ಸೋಮವಾರ ಮತ್ತು ಎಲ್ಲಾ ರಾಷ್ಟ್ರೀಯ ರಜಾದಿನಗಳಂದು ಮುಚ್ಚಿರುತ್ತದೆ.