ನೈನಿತಾಲ್ ರೋಪ್ ಮಾರ್ಗ ಕುಮಾವೂನ್ ಮಂಡಲ್ ವಿಕಾಸ್ ನಿಗಮ್ (KMVN) ಅಧಿಕಾರದ ಅಡಿಯಲ್ಲಿ ಬರುವ ಒಂದು ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಇದು ಭಾರತದಲ್ಲಿ ಸ್ಥಾಪಿಸಲಾದ ಮೊದಲ ಕೇಬಲ್ ಕಾರು (ವೈಮಾನಿಕ ರೋಪ್ಮಾರ್ಗ) ಮಾರ್ಗವಾಗಿದೆ. ಇದು 300 ಮೀ ಎತ್ತರದಲ್ಲಿದೆ ಹಾಗೂ 705 ಮೀ ಒಟ್ಟು ದೂರವನ್ನು ಹೊಂದಿದೆ. ಪ್ರತಿ ಕೇಬಲ್ ಕಾರು 825 ಕೆಜಿ (12 ವ್ಯಕ್ತಿಗಳು) ತೂಕವನ್ನು ಹೊರುವ ಗರಿಷ್ಠ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ರೋಪ್ ಮಾರ್ಗ ನೈನಿತಾಲ್ ನ ಪಟ್ಟಣವನ್ನು ಸ್ನೊ ವಿವ್ ತಾಣಕ್ಕೆ ಸಂಪರ್ಕಿಸುತ್ತದೆ. ರೋಪ್ ಮಾರ್ಗದ ವೇಗವು ಪ್ರತಿ ಸೆಕೆಂಡಿಗೆ 6 ಮೀಟರ್, ಇದಲ್ಲದೇ, ಪ್ರವಾಸಿಗರು ಇದರಲ್ಲಿ ಸಂಚರಿಸುವಾಗ ಮೇಲಿನಿಂದ ಕಾಣುವ ಸುತ್ತಲಿನ ಪ್ರದೇಶದ ಭವ್ಯ ನೋಟವನ್ನು ವೀಕ್ಷಿಸಿ ಆನಂದಿಸಬಬಹುದು.


Click it and Unblock the Notifications