ರಾಣಿ ತಾಲ್ ಜನಪ್ರಿಯ ಪ್ರವಾಸಿ ತಾಣ. ಹಿಮಾಚಲ ಪ್ರದೇಶದ ನಹಾನ್‌ನಲ್ಲಿದೆ. ಇದನ್ನು ರಾಣಿ ಕೆರೆ ಎಂದೂ ಕರೆಯಲಾಗುತ್ತದೆ. ನಹಾನ್ ಆಳುತ್ತಿದ್ದ ರಾಜ ಮನೆತನದವರು ಈ ಕೆರೆಯನ್ನು ಬಳಸುತ್ತಿದ್ದರು. ಇತ್ತೀಚೆಗೆ ಇದನ್ನು ಸುಂದರವಾದ ಪಿಕ್‌ನಿಕ್ ತಾಣವಾಗಿ ಪರಿವರ್ತಿಸಲಾಗಿದೆ. ನಿಸರ್ಗದ ಒಡಲಲ್ಲಿ ಒಂದಷ್ಟು ಹೊತ್ತು ಕಳೆಯಲೆಂದು ಜನರು ಇಲ್ಲಿಗೆ ಬರುತ್ತಾರೆ. ಸುತ್ತಲಿನ ಪ್ರದೇಶದಲ್ಲಿ ಆಹಾರ ಸೌಲಭ್ಯವನ್ನೂ ನೀಡಲಾಗಿದ್ದು ವಾಕಿಂಗ್ ಝೋನ್ ಆಗಿ ಬಳಕೆಯಾಗುತ್ತಿದೆ. ಪ್ರವಾಸಿಗರು ನಹಾನ್‌ಗೆ ಬಂದಲ್ಲಿ ಒಮ್ಮೆ ರಾಣಿ ತಾಲ್‌ಗೆ ಭೇಟಿ ನೀಡಲೇಬೇಕು. ಇಲ್ಲಿಗೆ ತಲುಪಲು ಸಾಕಷ್ಟು ಬಸ್ ಸೌಲಭ್ಯವೂ ಇದೆ.
ಪ್ರವಾಸಿಗರು ಕೆರೆಯಲ್ಲಿ ಬೋಟಿಂಗ್ ಕೂಡಾ ಮಾಡಬಹುದು. ಕೆರೆಯ ಸಮೀಪದಲ್ಲೆ ಹಿಂದೂ ದೇವತೆ ಶಿವನಿಗೆ ಅರ್ಪಿತವಾದ ದೇವಸ್ಥಾನವೂ ಇದೆ. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಿಂದೂ ಐತಿಹ್ಯಗಳ ಪ್ರಕಾರ, ಪಾಪಗಳನ್ನು ನಾಶ ಮಾಡುವ ಶಕ್ತಿಯನ್ನು ಇಲ್ಲಿನ ಶಿವ ಹೊಂದಿದ್ದಾನಂತೆ.


Click it and Unblock the Notifications