Search
 • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಜಯಲಕ್ಷ್ಮಿ ವಿಲಾಸ್ ಬಂಗಲೆ

ಜಯಲಕ್ಷ್ಮಿ ವಿಲಾಸ್ ಬಂಗಲೆ, ಮೈಸೂರು

2

ಮೈಸೂರಿನ ಅತ್ಯಂತ ಸೂಂದರವಾದ ಪಾರಂಪರಿಕಾ ಕಟ್ಟಡಗಳಲ್ಲಿ ಒಂದೆನಿಸಿದ ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ಎಲ್ಲಾ ಪ್ರವಾಸಿಗರೂ ಒಮ್ಮೆ ಹೋಗಿ ನೋಡಬೇಕಾಗಿ ನಮ್ಮ ವಿನಂತಿ. ಈ ಬಂಗಲೆಯು ಮೈಸೂರು ವಿಶ್ವವಿದ್ಯಾನಿಲಯದ ಆವರಣವಾಗಿರುವ ಹಚ್ಚ ಹಸಿರಿನಿಂದ ಸುಂದರವಾಗಿರುವ ಮಾನಸ ಗಂಗೋತ್ರಿಯಿಂದ ಸುತ್ತುವರೆದಿದ್ದು ಒಂದು ಬೆಟ್ಟದ ಮೇಲೆ ಕುಕ್ಕ್ರಹಳ್ಳಿ ಕೆರೆಯ ಪಶ್ಚಿಮದ ಭಾಗದಲ್ಲಿ ನೆಲೆಸಿದೆ. ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಅವಧಿಯಲ್ಲಿ ಮಹಾರಾಜ ಚಾಮರಾಜ ಒಡೆಯರವರ ದೊಡ್ಡ ಮಗಳಾದ ಯುವರಾಣಿ ಜಯಲಕ್ಷ್ಮಿ ಅಮ್ಮಣ್ಣಿರವರಿಗೆಂದು ನಿರ್ಮಿಸಲಾಯಿತು. ಈ ಬಂಗಲೆಯೂ ನಿರ್ಮಾಣಗೊಂಡ ಸಮಯದಲ್ಲಿ ಇದರ ಬೆಲೆ 7 ಲಕ್ಷವೆಂದು ಅಂದಾಜಿಸಲಾಗಿತ್ತು ಮತ್ತು ನಂತರ 2002ರಲ್ಲಿ ಇದನ್ನು ದುರಸ್ತಿಗೊಳಿಸಿದ ಸಂದರ್ಭದಲ್ಲಿ ಅದಕ್ಕಾಗಿ ತಗುಲಿದ ವೆಚ್ಚ ಬರೋಬರ್ರಿ 1.17 ಕೋಟಿ ರೂಪಾಯಿಗಳು. ಈ ಬಂಗಲೆಯನ್ನು 2006ರಲ್ಲಿ ಮತ್ತೊಮ್ಮೆ ಕರ್ನಾಟಕದ ರಾಜ್ಯಪಾಲರು ಉದ್ಘಾಟಿಸಿದರು.ದುರಸ್ತಿಗೊಳಿಸಿದ ಬಂಗಲೆಯೂ 6 ಎಕ್ಕರೆಗಳ ಜಾಗದಲ್ಲಿ ಚಾಚಿದ್ದು ಎರಡೂ ಕಡೆಗಳಲ್ಲಿ ಪ್ರವೇಶವನ್ನು ಹೊಂದಿದೆ. ಇದು 300 ಕಿಟಕಿಗಳು, 125 ಕೊಠಡಿಗಳು ಹಾಗೂ 287 ವೈಭವದಿಂದ ಕೊರೆಯಲಾದ ದ್ವಾರಗಳ ಜೊತೆಗೆ ಬೆಲೆಕಟ್ಟಲಾಗದ ಹಲವು ಕರಕುಶಲ ಪದಾರ್ಥಗಳನ್ನು ಹೊಂದಿದೆ.ಈ ಬಂಗಲೆಯನ್ನು ಮರ ಮತ್ತು ಕಬ್ಬಿಣ ಜೊತೆಗೆ ಇಟ್ಟಿಗೆ ಹಾಗೂ ಗಾರೆ ಬಳಸಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
30 Jul,Fri
Return On
31 Jul,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
30 Jul,Fri
Check Out
31 Jul,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
30 Jul,Fri
Return On
31 Jul,Sat