ಮಸ್ಸೂರಿಯ ಮತ್ತೊಂದು ಪ್ರಸಿದ್ಧ ಮಾರುಕಟ್ಟೆ ಸಿಸ್ಟರ್ಸ್ ಬಜಾರ್. ಬ್ರಿಟೀಷರ ಕಾಲದ ವಿಶ್ರಾಂತಿ ಧಾಮದಲ್ಲಿ ಸಿಸ್ಟರ್ಸ್ ಗಳಾಗಿ ಕೆಲಸ ಮಾಡಿದ ನರ್ಸ್ ಗಳಿಂದ ಈ ಸ್ಥಳಕ್ಕೆ ಈ ಹೆಸರು ಬಂದಿತು. ಬಜಾರ್ ಎಂದು ಕರೆದರೂ ಇದು ಒಂದು ವಸತಿ ಕಾಲನಿಯಾಗಿದೆ. ಇಲ್ಲಿ ರಸ್ತೆಯ ಬದಿಯಲ್ಲಿ ಹಲವಾರು ಹಳೆಯ ಮನೆಗಳು ಮತ್ತು ಅಂಗಡಿಗಳಿವೆ. ಇಲ್ಲಿನ ಮಿಠಾಯಿ ಅಂಗಡಿಗಳಿಗೆ ಒಮ್ಮೆ ಭೇಟಿ ನೀಡಿ ಇಲ್ಲಿನ ಸಿಹಿತಿನಿಸುಗಳ ರುಚಿಸವಿಯದೆ ಯಾರೂ ಹೋಗುವುದಿಲ್ಲ.


Click it and Unblock the Notifications