ಸಹಾರಾ ಮಾರುಕಟ್ಟೆ, ಕೋಟೆಯ ಬಳಿಯಿರುವ ವಿಕ್ಟೋರಿಯಾ ಟರ್ಮಿನಸ್ ನಿಂದ ನಡೆದುಕೊಂಡು ಹೋಗಬಹುದಾದಷ್ಟು ದೂರದಲ್ಲಿದೆ. ಹಾಜಿ ಅಲಿ ರಸ್ತೆಯನ್ನು ದಾಟುತ್ತಿದ್ದಂತೆ ಟಾರ್ಡಿಯೋ ದ ಹಾಜಿ ಅಲಿ ಮಾರುಕಟ್ಟೆ ಕಾಣಸಿಗುತ್ತದೆ. ಐಪೋಡ್ಸ್, ಐಪ್ಯಾಡ್ಸ್, ಎಮ್ ಪಿ3 ಪ್ಲೇಯರ್ ಗಳು, ಲ್ಯಾಪ್ ಟಾಪ್ ಮೊದಲಾದವುಗಳು ಇಲ್ಲಿ ದೊರೆಯುತ್ತವೆ. ಹಾಗೂ ಮುಂಬಯಿಯ ಚೌಕಾಸಿ ಇಲ್ಲಿಯೂ ನಡೆಯುತ್ತದೆ. ಬ್ರಾಂಡೆಡ್ ವಸ್ತುಗಳ ಮೇಲೂ ನೀವಿಲ್ಲಿ ಚೌಕಾಸಿ ಮಾಡಿ ಖರೀದಿಸಬಹುದು! ಹೀಗಾಗಿ ಮುಂದಿನ ಬಾರಿ ಆಪಲ್ ಉತ್ಪನ್ನವೊಂದನ್ನು ಖರೀದಿಸುವಾಗ ಇಲ್ಲಿಗೆ ಬರುವುದನ್ನು ಮರೆಯಬೇಡಿ. ನಿಮ್ಮ ಚೌಕಾಸಿ ಸಾಮರ್ಥ್ಯದ ಮೇಲೆ ಅತ್ಯಂತ ಕಡಿಮೆ ಬೆಲೆಗೆ ವಸ್ತು ನಿಮ್ಮದಾಗಬಹುದು.


Click it and Unblock the Notifications