ಭಾರತದಲ್ಲಿ ಮುಂಬೈ ನಿಂದಲೇ ಫ್ಯಾಶನ್ ಆರಂಭವಾದ ಹಾಗೇ ಬೀದಿ ಖರೀದಿ ಎಂಬ ವೃತ್ತಿ ಆರಂಭವಾದದ್ದೇ ಕಾಸ್ವೇ ಇಂದ. ಇಷ್ಟೆ ಅಲ್ಲದೇ ಕಾಸ್ವೇ ಬೀದಿ ಮಾರಾಟಕ್ಕೆ/ಖರೀದಿಗೆ ಹೆಚ್ಚು ಪ್ರಸಿದ್ಧವಾಗಿದ್ದು ಬ್ರ್ಯಾಂಡ್ ಶೋ ರೂಮ್ ಗಳನ್ನು ಹೊಂದಿವೆ. ಈ ಪ್ರದೇಶವು ಇಂಡಿಯಾ ಗೇಟ್ವೆ, ವಿಕ್ಟೋರಿಯಾ ಟರ್ಮಿನಸ್, ಸಾಂಪ್ರದಾಯಿಕ ರೀಗಲ್ ಸಿನಿಮಾ ಹಾಗೂ ಲಿಯೋಪೋರ್ಡ್ ಕೆಫೆ ಗೆ ಹತ್ತಿರದಲ್ಲಿದೆ. ಈ ಸ್ಥಳಕ್ಕೆ ಕಾಲು ನಡಿಗೆಯಲ್ಲೆ ಭೇಟಿ ನೀಡುವುದು ಒಳ್ಳೆಯ ಅನುಭವವನ್ನು ಕೊಡುತ್ತದೆ. ಪ್ರಮುಖವಾಗಿ ಹುಡುಗಿಯರಿಗೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಗೆ ಇದು ಸೂಕ್ತ ಸ್ಥಳ! ಮುಂಬೈ ನಗರದಲ್ಲಿ ಮಾರುಕಟ್ಟೆಯಲ್ಲಿ ಮುಂದಿರುವ ಪ್ರಮುಖ ಅಂಗಡಿಗಳ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಅದೆ ಗುಣಮಟ್ಟದ ವಸ್ತುಗಳು ದೊರಕುತ್ತವಾದರೆ ಅನ್ಯಥಾ ಹೆಚ್ಚು ಹಣವನ್ನೇಕೆ ಭರಿಸಬೇಕು ?


Click it and Unblock the Notifications