ಕೇಸರಿಯವು ಪ್ರಪಂಚದ ಅತಿದೊಡ್ಡ ಬೌದ್ಧ ಸ್ತೂಪವನ್ನು ಹೊಂದಿದೆ. 1998ರಲ್ಲಿ ಭಾರತೀಯ ಪುರಾತತ್ವ ಪರಿವೀಕ್ಷಣಾಲಯವು ಕಂಡು ಹಿಡಿಯಿತು. ಈ ಸ್ತೂಪವು 104 ಅಡಿ ಎತ್ತರವಿದೆ. ಇದು ಜಾವದಲ್ಲಿನ ಬೊರೊಬೊದುರ್ ಸ್ತೂಪಕ್ಕಿಂತ ಎತ್ತರವಾದದ್ದು. ಇದು ಮೊದಲು 150 ಅಡಿ ಇತ್ತು ಆದರೆ 1934ರ ಬಿಹಾರದಲ್ಲಿನ ಭೂಕಂಪದಿಂದಾಗಿ 104 ಅಡಿಗಳಾಯಿತು ಎಂದು ಹೇಳಲಾಗುತ್ತದೆ. ಈ ಸ್ತೂಪದಲ್ಲಿ ಬೌದ್ಧ ಶೈಲಿಯನ್ನು ಕಾಣಬಹುದಾಗಿದೆ. ಈ ಸ್ತೂಪವನ್ನು ನೋಡುವುದೇ ಒಂದು ಸಂತೋಷ.


Click it and Unblock the Notifications