ಗುರುದ್ವಾರ ಬವೋಲಿ ಸಾಹಿಬ್ ಮೊಹಾಲಿಯ ಜಿರಾಕ್ಪುರ್ - ಕಾಲ್ಕಾ ಹೈವೇ ಯಲ್ಲಿರುವ ಪ್ರಖ್ಯಾತ ದೇವಾಲಯವಾಗಿದೆ.ಬಾಬಾ ಗುರುದತ್ ವಂಶಸ್ಥರು ಇಲ್ಲಿ ಅನೇಕ ವರ್ಷ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ಅದನ್ನು ಕೇಳಿದ ನಂತರ ಗುರು ಗೋವಿಂದ್ ಸಿಂಗ್ ಜಿ ಬಂಗಾನಿ ಕದನದ ನಂತರ ಆನಂದಪುರ ಸಾಹಿಬ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಇಲ್ಲಿ ಭೇಟಿ ನೀಡಿದರು. ಇಲ್ಲಿನ ಸ್ಥಳೀಯರು ಗುರು ಗೋಬಿಂದ್ ಜಿ ಯಿಂದ ಈ ಪ್ರದೇಶದ ನೀರು ಸರಬರಾಜು ಪುನರ್ ಸ್ಥಾಪಿಸಲು ಕೇಳಿಕೊಂಡರು ಎನ್ನಲಾಗಿದೆ.
ಸ್ಥಳೀಯರ ಬೇಡಿಕೆ ಈಡೇರಿಸಲು ಗುರು ಗೋವಿಂದ್ ಜಿ ನೆಲಕ್ಕೆ ಒಂದು ಬಾಣವನ್ನು ಬಿಟ್ಟರು ಮತ್ತು ಅಲ್ಲಿ ಬಾವಿ ನಿರ್ಮಾಣವಾಯಿತು.ನಂತರ ಈ ಸ್ಥಳವನ್ನು ಒಂದು ಪವಿತ್ರ ಸ್ಥಳವನ್ನಾಗಿ ಗುರುತಿಸಲಾಯಿತು ಮತ್ತು ಇದಕ್ಕೆ ಗುರುದ್ವಾರ ಬವೋಲಿ ಸಾಹೇಬ ಎಂದು ಹೆಸರಿಡಲಾಯಿತು.ಇಲ್ಲಿನ ಪವಿತ್ರ ತೀರ್ಥವನ್ನು ಸೇವಿಸಲು ದೇಶದ ಅನೇಕ ಕಡೆಗಳಿಂದ ಅಮವಾಸೆಯಂದು ಸಾಕಷ್ಟು ಭಕ್ತರು ಆಗಮಿಸುತ್ತಾರೆ.ಸಿಖ್ ಸಮುದಾಯದ ಧಾರ್ಮಿಕ ಮಹತ್ವವನ್ನು ಪಡೆದಿರುವುದರಿಂದ ಈ ಸ್ಥಳ ಜನಪ್ರಿಯತೆ ಪಡೆದಿದೆ.ಪ್ರವಾಸಿಗರು ಭೇಟಿ ನೀಡಲೇಬೇಕು.


Click it and Unblock the Notifications