Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಆಕರ್ಷಣೆಗಳು » ಕೃಷ್ಣ ಜನ್ಮಭೂಮಿ ಮಂದಿರ

ಕೃಷ್ಣ ಜನ್ಮಭೂಮಿ ಮಂದಿರ, ಮಥುರಾ

1

ಪ್ರಸಿದ್ಧ ಕೃಷ್ಣ ಜನ್ಮಭೂಮಿ ಮಂದಿರ ಅಥವಾ ಕೃಷ್ಣ ಜನ್ಮಸ್ಥಾನ ಭಾರತದಲ್ಲಿನ ಹಿಂದೂಗಳ ಹಲವಾರು ಪೂಜಾ ಸ್ಥಳಗಳಲ್ಲಿ ಬಹುಮುಖ್ಯವಾದದ್ದು. ಮಂದಿರದ ಸಂಕೀರ್ಣದಲ್ಲಿ ಒಂದು ಸಣ್ಣ ಸೆರೆಮನೆಯಂತಹ ಕಟ್ಟಡವು ಇದೆ. ಇದೇ ಸ್ಥಳದಲ್ಲಿ ಶ್ರೀಕೃಷ್ಣನು ಜನ್ಮ ತಾಳಿದ್ದು ಎಂಬ ನಂಬಿಕೆ ಇದೆ. ಈ ಮಂದಿರವನ್ನು ಆರ್ಚಾದ ರಾಜಾ ವೀರ ಸಿಂಗ್ ಬಂಡೇಲನು ಜಹಾಂಗಿರ್ ಕಾಲದಲ್ಲಿ ಕಟ್ಟಿಸಿದ್ದು ಎಂಬ ಪ್ರತೀತಿ ಇದೆ.

ಇನ್ನೂ ಹಿಂದಕ್ಕೆ ತಿರುಗಿ ನೋಡಿದರೆ ಈ ಮಂದಿರದ ಕಟ್ಟಡದ ಬಗ್ಗೆ ಇನ್ನೊಂದು ಕಥೆ ಜನಜನಿತವಾಗಿದೆ. ಈ ಮಂದಿರವನ್ನು 5000 ವರ್ಷಗಳ ಹಿಂದೆ ಶ್ರೀ ಕೃಷ್ಣನ ಮರಿಮೊಮ್ಮಗನು ಕಟ್ಟಿಸಿದ್ದು ಎಂಬ ನಂಬಿಕೆಯೂ ಇದೆ. ಆ ಸಂದರ್ಭದಲ್ಲಿ ಮಂದಿರದ ವೈಭವದ ವರ್ಣನೆಯು ಯಾವುದೇ ಪದಗಳಿಗೆ ಅಥವಾ ಚಿತ್ರಕಲೆಗೆ ನಿಲುಕಲಾಗದಷ್ಟು ಉತ್ತಮವಾಗಿತ್ತು ಎಂದು ಹೇಳಲಾಗುತ್ತದೆ. ಮೂಲ ಮಂದಿರವನ್ನು ಕ್ರಿ.ಶ. 1017ನೇ ಇಸ್ವಿಯಲ್ಲಿ ಮುಹಮ್ಮದ್ ಘಜನಿ ಅನೇಕ ಬೌದ್ಧಧಾಮಗಳ ಜೊತೆಯಲ್ಲಿಯೇ ಇನ್ನೂ ನಾಶಮಾಡಿದ.

ಕಾಲಾಂತರದಲ್ಲಿ ಈ ಮಂದಿರ ಅನೇಕ ಶಿಲ್ಪಕಲಾ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈಗಿನ ಮಂದಿರ ಪಕ್ಕಾ ಹಿಂದೂ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ. ಔರಂಗಜೇಬ್ ಕಾಲದಲ್ಲಿ ಮಂದಿರದ ಹತ್ತಿರವೇ ಒಂದು ಬೃಹತ್ತಾದ ಮಸೀದಿಯನ್ನು ಈ ಮಂದಿರದ ಆಕರ್ಷಣೆ ಕಡಿಮೆ ಮಾಡಲು ಕಟ್ಟಿಸಲಾಗಿತ್ತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed