ಯಮುನಾ ನದಿಯ ತಟದಲ್ಲಿ ಕಂಸ ಕಿಲ್ಲಾ ಉಪಸ್ಥಿತವಿದೆ. ಈಗ ಈ ಕಟ್ಟಡ ನಾಶವಾಗಿದ್ದರೂ ಆಗಿನ ಕಾಲದಲ್ಲಿ ಇದು ಶ್ರೀಕೃಷ್ಣದ ಸೋದರಮಾವ ಕಂಸನ ಮನೆಯಾಗಿತ್ತು. ಈ ಕೋಟೆಯನ್ನು ದೊಡ್ಡ ಪ್ರದೇಶದಲ್ಲಿ ಕಟ್ಟಲಾಗಿದ್ದು ಸುತ್ತಲೂ ಭದ್ರವಾದ ಗೋಡೆಗಳಿವೆ. ಹಿಂದೂ ಹಾಗು ಮುಸಲ್ಮಾನರ ಶಿಲ್ಪಕಲೆಯ ಶೈಲಿಯನ್ನು ಈ ಕೋಟೆ ಪ್ರತಿಬಿಂಬಿಸುತ್ತದೆ. ಬಹಳಷ್ಟು ಜನರ ಆಳ್ವಿಕೆಯ ಕೈಗೆ ಸಿಕ್ಕಿದ್ದ ಈ ಕೋಟೆಯನ್ನು 16ನೇ ಶತಮಾನದಲ್ಲಿ ಆಂಬರದ ರಾಜಾ ಮಾನಸಿಂಗ್ ಜೀರ್ಣೋದ್ಧಾರದ ಕೆಲಸವನ್ನು ಕೈಗೊಂಡಿದ್ದ ಹಾಗು ಜೈಪುರದ ಮಹಾರಾಜ ಸವಾಯಿ ಜಯಸಿಂಗ್ ಒಂದು ಖಗೋಳ ವೀಕ್ಷಣಾಲಯವನ್ನು ಕಟ್ಟಿಸಿದ್ದ ಎಂದು ಹೇಳಲಾಗುತ್ತದೆ. ಆದರೆ ಇಂದು ಇಲ್ಲಿ ಯಾವುದೇ ವೀಕ್ಷಣಾಲಯ ಕಂಡುಬರುವುದಿಲ್ಲ.


Click it and Unblock the Notifications