ಮರವಂತೆ ಬೀಚ್ ಕರ್ನಾಟಕದ ಸುಂದರ ಬೀಚುಗಳಲ್ಲಿ ಒಂದಾಗಿದ್ದು ಉಡುಪಿಯಿಂದ 55 ಕಿ.ಮೀ ದೂರದಲ್ಲಿದೆ. ಈ ಬಿಳಿ ಮರಳಿನಿಂದ ಕೂಡಿದ ಬೀಚು ಬೆಸ್ತರೆ ಇರುವ ಕಂಚುಗೋಡು ಗ್ರಾಮಕ್ಕೆ ಸಮೀಪದಲ್ಲಿದೆ. ಈ ಬೀಚು ವಿವಿಧ ಬಗೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತ ವಾತಾವರಣವನ್ನು ಹೊಂದಿದೆ. ಇಲ್ಲಿ ಸ್ಕೂಬಾ ಡೈವಿಂಗ್ ಮತ್ತು ಸ್ನೊರ್ಕೆಲಿಂಗ್ ನಂತಹ ಚಟುವಟಿಕೆಗಳಿಗೆ ಅವಕಾಶವಿದೆ. ಇದರ ಜೊತೆಗೆ ಪ್ರವಾಸಿಗರು ಇಲ್ಲಿನ ಬೀಚಿಗೆ ಸಮೀಪದಲ್ಲಿಯೆ ಹರಿಯುವ ಸೌಪರ್ಣಿಕ ನದಿಯಲ್ಲಿ ಈಜಾಡುವ ಅವಕಾಶ ಸಹಾ ಇಲ್ಲಿ ಸಿಗುತ್ತದೆ. ಕೊಡಚಾದ್ರಿಯ ಬೆಟ್ಟಗಳು ಮತ್ತು ಸುಂದರ ತೆಂಗಿನ ತೋಪುಗಳು ಈ ಬೀಚಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರು ಇಲ್ಲಿಗೆ ಆಗಸ್ಟ್ ನಿಂದ ಮಾರ್ಚ್ ತಿಂಗಳುಗಳ ನಡುವೆ ಭೇಟಿ ಕೊಟ್ಟರೆ ಉತ್ತಮ. ಈ ಬೀಚು ಕುಂದಾಪುರದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 17ರ ಪಕ್ಕದಲ್ಲಿಯೆ ಇರುವುದರಿಂದ ಪ್ರವಾಸಿಗರು ಸುಲಭವಾಗಿ ಇಲ್ಲಿಗೆ ತಲುಪಬಹುದು.


Click it and Unblock the Notifications