ಸಂತ ಜಿರೋಮ್ ಚರ್ಚ್ ರೈಸ್ ಮಾಗೊಸ್ ಕೋಟೆಯ ಕೆಳಭಾಗದಲ್ಲಿ ನೆಲೆಸಿರುವ ಚರ್ಚ್ ಆಗಿದೆ. ಈ ಕೋಟೆಯಲ್ಲಿ ಪ್ರತಿ ವರ್ಷ ಜನವರಿ 6 ರಂದು ಆಚರಿಸಲಾಗುವ 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಎಂಬ ಉತ್ಸವದಿಂದ ಪ್ರಸಿದ್ಧವಾಗಿದೆ. 'ಫೆಸ್ಟಾ ಡೊಸ್ ರೈಸ್ ಮಾಗೊಸ್' ಪದವನ್ನು ಭಾಷಾಂತರಿಸಿದಾಗ ಮುರು ಜ್ಞಾನವುಳ್ಳ ಆತ್ಮಗಳ ಉತ್ಸವ ಎಂದು ಅರ್ಥ ಕೊಡುತ್ತದೆ. ಈ ಕೋಟೆಯ ಭೇಟಿಗೆ ಬೇಸಿಗೆ ಸಮಯವು ಸೂಕ್ತವಾಗಿರುತ್ತದೆ.
ರೈಸ್ ಮಾಗೊಸ್ ಕೋಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಸಾಮಾನ್ಯವಾಗಿ ಪಣಜಿ, ವಾಸ್ಕೊ ಮತ್ತು ಮಾರ್ಗೊಗಳಿಂದ ಪ್ರವಾಸಗಳು ಲಭ್ಯವಿದ್ದು, ಈ ಕೋಟೆಯನ್ನು ಕೇವಲ ಒಂದು ಘಂಟೆಯೊಳಗೆ ತಲುಪಬಹುದು. ಪಣಜಿಯಿಂದ ಪ್ರಯಾಣ ಕಾಲಾವಧಿಯು ಇನ್ನೂ ಕಡಿಮೆಯಾಗಿರುತ್ತದೆ. ಉತ್ತರ ಗೋವಾದ ಕ್ಯಾಂಡೋಲಿಮ್, ಬಾಗಾ ಮತ್ತು ಕಲಂಗುಟ್ ನಲ್ಲಿರುವ ಪ್ರವಾಸಿಗರು ಬಾಡಿಗೆ ಕ್ಯಾಬ್ ಅಥವಾ ಸ್ವಂತ ವಾಹನಗಳ ಮುಖಾಂತರ ಇಲ್ಲಿಗೆ ತಲುಪುವುದು ಉತ್ತಮ.


Click it and Unblock the Notifications