Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗಳೂರು » ಆಕರ್ಷಣೆಗಳು » ಪಶ್ಚಿಮ ಘಟ್ಟ

ಪಶ್ಚಿಮ ಘಟ್ಟ, ಮಂಗಳೂರು

3

ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಸಹ್ಯಾದ್ರಿ ಪರ್ವತ ಸಮೂಹ ಅಂತಲೂ ಕರೆಯಲಾಗುತ್ತದೆ. ಇದು ದೇಶದ ಪಡುವಣ ದಿಕ್ಕನ್ನು ವ್ಯಾಪಿಸಿದೆ. ಇದು ಅತ್ಯಂತ ವಿಶಾಲ ಹಾಗೂ ಉದ್ದನೇ ಪರ್ವತ ಶ್ರೇಣಿಯಾಗಿದೆ. ಒಟ್ಟು ಐದು ರಾಜ್ಯವನ್ನು ಇದು ಬಳಸಿಕೊಂಡು ಬಂದಿದೆ. ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮಾರ್ಗವಾಗಿ ಸಾಗಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಇದರ ಒಟ್ಟು ಉದ್ದ 1600 ಕಿ.ಮೀ. ಇದೆ. ಅನೇಕ ನದಿಯ ಹರಿವಿಗೆ ಇದು ಸಕಾರಿಯಾಗಿದೆ. ಶೇ.40 ರಷ್ಟು ಪ್ರದೇಶ ನದಿ ಕಾಲುವೆಯಾಗಿ ಬಳಕೆಯಾಗುತ್ತಿದೆ. ಈ ತಾಣವು ಅನೇಕ ಪ್ರಭೇದದ ಸಸ್ಯ ಹಾಗೂ ಪ್ರಾಣಿಗಳ ಬೀಡಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಾದ 325 ಸಂತತಿಗಳು ಇಲ್ಲಿವೆ. ಈ ಘಟ್ಟದ ಸರಾಸರಿ ಎತ್ತರ 1200 ಮೀಟರ್‌ ಆಗಿದೆ. ಪಶ್ಚಿಮ ಘಟ್ಟವು ದೊಡ್ಡ ಪರ್ವತಗಳ ಸಾಲಿಗೆ ಬರುವುದಿಲ್ಲ. ಆದರೆ ಚಿಕ್ಕ ಪುಟ್ಟ ಪರ್ವತಗಳು ಇಲ್ಲಿವೆ.

ಈ ಘಟ್ಟ ಪ್ರದೇಶದಲ್ಲಿ ಸಾಕಷ್ಟು ಮಾನವ ನಿರ್ಮಿತ ಕೆರೆಗಳು, ಜಲಾಶಯಗಳು ಕಾಣ ಸಿಗುತ್ತವೆ. ಪಳನಿ ಗುಡ್ಡದಲ್ಲಿರುವ ಕೊಡೇಕೆನಾಲ್‌ ಕೆರೆ ಹಾಗೂ ನೀಲಗಿರಿ ಪರ್ವತದಲ್ಲಿರುವ ಊಟಿ ಕೆರೆಗಳು ಇಂತಹ ಕೆರೆಗಳಲ್ಲಿ ಪ್ರಮುಖವಾದವುಗಳು. ಇದರ ವ್ಯಾಪ್ತಿಯಲ್ಲಿ ಸಾಕಷ್ಟು ನದಿಗಳು ಬರುತ್ತವೆ. ಅವುಗಳಲ್ಲಿ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳು ಸೇರಿವೆ. ಇವು ಈ ಮಾರ್ಗವಾಗಿಯೇ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ. ಮಳೆಗಾಲದ ಸಂದರ್ಭದಲ್ಲಿ ಅನೇಕ ನದಿಗಳು ಜಲಪಾತಗಳನ್ನು ಸೃಷ್ಟಿಸುತ್ತವೆ. ಇವುಗಳಲ್ಲಿ ಕರ್ನಾಟಕದ ಜನಪ್ರಿಯ ಜೋಗ ಜಲಪಾತ ಕೂಡ ಒಂದು. ದೇಶದಲ್ಲಿಯೇ ಅತ್ಯಂತ ಜನಪ್ರಿಯ ಜಲಪಾತಗಳ ಪಟ್ಟಿಯಲ್ಲಿ ಇದು ಬರುತ್ತದೆ. ಸಾಕಷ್ಟು ಸಾವಯವ ಕಾರ್ಯಕ್ಕೆ ಇದು ಜನಪ್ರಿಯವಾಗಿದೆ. ಇಲ್ಲಿನ ವಾತಾವರಣವೂ ಅತ್ಯಂತ ನಿರ್ಮಲವಾಗಿದ್ದು, ಹಿಮಾಲಯ ಪರ್ವತ ಶ್ರೇಣಿ ಭಾಗಕ್ಕೆ ಹೋಲಿಸಬಹುದಾಗಿದೆ. ವಾತಾವರಣದ ವೈಪರಿತ್ಯವನ್ನು ಇದು ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. ಪ್ರಕೃತಿ ಸಮತೋಲನ ಕಾಪಾಡಿ, ರಾಷ್ಟ್ರೀಯ ಮಟ್ಟದ ವಾತಾವರಣ ಸಮತೋಲನ ಕಾಪಾಡುವ ಕಾರ್ಯ ಮಾಡುತ್ತಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue