Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗಳೂರು » ಹವಾಮಾನ

ಮಂಗಳೂರು ಹವಾಮಾನ

ಚಳಿಗಾಲದ ಸಮಯ ಪ್ರವಾಸಕ್ಕೆ ಯೋಗ್ಯವಾದುದಾಗಿದೆ.

ಬೇಸಿಗೆಗಾಲ

ಮಂಗಳೂರು ಬೇಸಿಗೆಯಲ್ಲಿ ಉಷ್ಣ ಹಾಗೂ ತೇವಾಂಶ ಕಡಿಮೆ ಇರುವ ವಾತಾವರಣ ಹೊಂದಿರುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿ ತಾಪಮಾನ 24 ಡಿಗ್ರಿ ಸೆಲ್ಶಿಯಸ್‌ನಿಂದ 34 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ.

ಮಳೆಗಾಲ

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇಲ್ಲಿ ಮಳೆಗಾಲವಿರುತ್ತದೆ. ಅಪಾರ ಪ್ರಮಾಣದಲ್ಲಿ ತೇವಾಂಶ ವಾತಾವರಣದಲ್ಲಿ ತುಂಬಿರುತ್ತದೆ. ವರ್ಷದ ಇತರೆ ಸಮಯಕ್ಕಿಂತ ಈ ಸಮಯದಲ್ಲಿ ಇಲ್ಲಿ ತೇವಾಂಶ ಪ್ರಮಾಣ ಹೆಚ್ಚು. ಸರಾಸರಿ ಮಳೆ ಪ್ರಮಾಣ ಇಲ್ಲಿ 750 ಮಿ.ಮೀ.ನಿಂದ 30 ಇಂಚ್‌ವರೆಗೂ ಆಗುತ್ತದೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವುದರಿಂದ ಮಂಗಳೂರಿನಲ್ಲಿ ಮಳೆ ಪ್ರಮಾಣ ಅಧಿಕ.

ಚಳಿಗಾಲ

ಡಿಸೆಂಬರ್‌ನಿಂದ ಮಾರ್ಚ್ ಸಮಯದಲ್ಲಿ ಇಲ್ಲಿ ಚಳಿಗಾಲ ಇರುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಇಳಿಕೆ ಆಗಿರುತ್ತದೆ. ಒಣದಾದ ವಾತಾವರಣ ಚಳಿಗಾಲದಲ್ಲಿ ಇರುತ್ತದೆ. ತಾಪಮಾನ ಕೂಡ ಈ ಸಮಯದಲ್ಲಿ 30 ಡಿಗ್ರಿ ಸೆಲ್ಶಿಯಸ್‌ನಿಂದ 19 ಡಿಗ್ರಿ ಸೆಲ್ಶಿಯಸ್‌ ನಡುವೆ ಇರುತ್ತದೆ. ಪ್ರವಾಸಕ್ಕೆ ಈ ಸಮಯ ಯೋಗ್ಯವಾದುದಾಗಿದೆ.