Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ದರ್ಯಾ ಖಾನ್ ಸಮಾಧಿ

ದರ್ಯಾ ಖಾನ್ ಸಮಾಧಿ, ಮಾಂಡು

1

ದರ್ಯಾ ಖಾನ್ ನ ಸಮಾಧಿಯು ಮಾಂಡುವಿನ ಮಹತ್ವ ಪೂರ್ಣ ಕಟ್ಟಡಗಳಲ್ಲೋಂದು. ಈ ಸಮಾಧಿಗೆ ಬೇಟಿ ನೀಡಿದರೆ ಇನ್ನೊಂದು ಯುಗಕ್ಕೇ ಬೇಟಿ ನೀಡಿದಂತೆ. ಸ್ಮಾರಕದ ಮೇಲಿನ ಕಲಾಕೃತಿ ಮತ್ತು ಸಂಕೀರ್ಣ ಕೆತ್ತನೆಗಳನ್ನು ಅವಲೋಕಿಸಿದಾಗ ನಿಜಕ್ಕೂ  ದಿಗ್ಭ್ರಮೆಯುಂಟಾಗುತ್ತದೆ. ಹೆಸರೇ ಹೇಳುವಂತೆ ಈ ಸ್ಮಾರಕವು ದರ್ಯಾ ಖಾನ್ ನು ಚಿರನಿದ್ರೆಯಲ್ಲಿರುವ ತಾಣ. ಹೊಸೈ ಹಳ್ಳಿ ಮತ್ತು ರೇವಾ ಕುಂಡಗಳ ಮಧ್ಯದಲ್ಲಿರುವ ಈ ಸ್ಮಾರಕದ ಆಸುಪಾಸಿನಲ್ಲಿ ಇನ್ನೂ ಅನೇಕ ನೋಡತಕ್ಕ ಸ್ಥಳಗಳಿವೆ.

ನಾಲ್ಕು ಮೂಲೆಗಳಲ್ಲಿ  ಗುಮ್ಮಟಗಳ ಹೊಂದಿರುವ ಈ ಸಮಾಧಿಯ ವಾಸ್ತುಶಿಲ್ಪವು  ತಾಜ್ಮಹಲ್ ಮತ್ತು ಹೊಶಂಗ್ ಷಾ ನ  ಸಮಾಧಿಯನ್ನು  ಹೋಲುತ್ತದೆ. ಅಲ್ಲದೆ, ಈ  ಸಮಾಧಿಯು ಎತ್ತರದ ವೇದಿಕೆಯ ಮೇಲಿದ್ದು, ಚೌಕಾಕಾರದಲ್ಲಿರುವ ವೇದಿಕೆಯ ಮೇಲೆ  ಗುಮ್ಮಟಗಳಿಗೆ ಆಶ್ರಯ ದೊರೆಯಲೆಂದು ಕಮಾನುಗಳನ್ನು ನಿರ್ಮಿಸಲಾಗಿದೆ. ಒಳ ಗೋಡೆಯಯ ಮೇಲಿನ ಕಮಾನುಗಳಿಗೆ ನೀಲವರ್ಣದ ಶಿಲೆಗಳನ್ನು ಜೋಡಿಸಿದ್ದು ಸ್ಮಾರಕದ ಒಳಮೈಗೆ ರಾಜಗಾಂಭೀರ್ಯ ತಂದುಕೊಟ್ಟಿದೆ.  ಕಲ್ಲಿನಲ್ಲಿ  ಜಾಲರಿ ಕಾಮಗಾರಿಯು ಬೆಳಕು ಮತ್ತು ಗಾಳಿಯ ಅವಶ್ಯಕತೆಯನ್ನು ಪೂರೈಸಲು ಆ ಯುಗದಲ್ಲಿ ಮಾಡಿಕೊಂಡ ಕುಶಲ ಮಾರ್ಗವಾಗಿದೆ. 

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun

Near by City