Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಮಾಂಡು

1

ಘೋರಿ ರಾಜವಂಶದ ಆಡಳಿತಗಾರರಿಂದ 1454 ರಲ್ಲಿ ನಿರ್ಮಿಸಲ್ಪಟ್ಟ ಜಾಮಾ ಮಸೀದಿಯು ಇತಿಹಾಸದ ಮುಂದೆ  ಮೂಕ ಪ್ರೇಕ್ಷಕನಂತೆ ಗತಕಾಲದ ವೈಭವವನ್ನು ಸಾರುತ್ತಾ ನಿಂತಿದೆ. ಈ ತಾಣವು  ಆರಾಧನೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳವಾಗಿದೆ. ಇಲ್ಲಿನ  ಕಂಬಗಳು ಮತ್ತು ಸಮೆಗಲ್ಲು ಮಾರ್ಗಗಳು ಆತ್ಮಾವಲೋಕನಕ್ಕೆ ಅವಕಾಶನೀಡುವದಲ್ಲದೇ ಇಂದಿನ ವೇಗದ  ಜೀವನದ ಒತ್ತಡವನ್ನು ನಿವಾರಿಸಿ  ಸಮತೋಲನ ಪಡೆಯುವಲ್ಲಿ ನೆರವಾಗುತ್ತದೆ.

ಬೃಹದಾಕಾರದ ಇದರ ಕಟ್ಟಡ ದಮಾಸ್ಕಸ್ ಮಸೀದಿಯನ್ನು ನೆನಪಿಸಿದರೆ, ಇದರ ವಾಸ್ತುಶಿಲ್ಪವು ಪಶ್ತೂನ್ ಶೈಲಿಯದ್ದಾಗಿದೆ. 'ಜಾಮಾ ಮಸೀದಿ' ಯ ಅಕ್ಷರಶಃ ಅರ್ಥವೇ "ಬೃಹತ್ ಅಥವಾ ಮಹತ್ತರ ಮಸೀದಿ" ಎಂದು.  ಕಟ್ಟಡದ ಗಾತ್ರದ ಹೊರತಾಗಿಯೂ, ವಾಸ್ತುಶಿಲ್ಪದ ಸರಳತೆಯಿಂದಾಗಿ ಇದು ಭಯಂಕರ ಎನಿಸುವದಿಲ್ಲ.  ದೊಡ್ಡ ಅಂಗಳ, ಹಲವಾರು ಕಂಬಗಳು ಮತ್ತು ಭವ್ಯ ಪ್ರವೇಶದ್ವಾರ ಇವೆಲ್ಲವನ್ನೂ ಅಷ್ಟು ಹಿಂದೆಯೇ ಇಷ್ಟು ಸುಸಜ್ಜಿತವಾಗಿ ಮಾಡಿದ್ದರೆಂಬುದು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕೇವಲ ಧಾರ್ಮಿಕ ಕಾರಣಕ್ಕಾಗಿ ಅಲ್ಲದೆ ಇಲ್ಲಿನ ಭವ್ಯತೆಯ ಅದ್ಭುತ ರಚನೆಯನ್ನು ವೀಕ್ಷಿಸಲು ಅದರ ಅನಿರ್ವಚನೀಯ ಅನುಭವವನ್ನು ಪಡೆಯಲು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City