ಹೋಶಂಗ್ ನ ಸಮಾಧಿಯು ಭಾರತದಲ್ಲೇ ಪ್ರಥಮ ಅಮೃತಶಿಲಾ ರಚನೆಯಾಗಿದೆ ಹಾಗು ಅಫಘನ್ ವಾಸ್ಥುಶಿಲ್ಪಕ್ಕೆ ಉತ್ತಮ ಉದಾಹರಣೆಯೂ ಆಗಿದೆ. ಇದರ ಅದ್ಭುತ ಗುಮ್ಮುಟ ವಿನ್ಯಾಸ, ಕಮಾನುಗಳು ಮತ್ತು ಗವಾಕ್ಷಿಗಳು ಪ್ರಸಿದ್ಧ ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿಯಾದವು ಎಂಬುದು ಈ ಸಮಾಧಿಯ ಹೆಗ್ಗಳಿಕೆ. ದಕ್ಷಿಣದ ಹಾದಿಯಲ್ಲಿ ಶ್ವೇತ ವರ್ಣದ ರಚನೆಯ ಮೇಲೆ ನೀಲಿ ಬಣ್ಣದ ನಕ್ಷತ್ರಗಳು ಮತ್ತು ಕಮಲದ ಚಿತ್ತಾರಗಳು ಆಕರ್ಷಿಸುತ್ತವೆ. ಪ್ರೇಮ ಇತಿಹಾಸದ ಸೌಧ ತಾಜ್ ಮಹಲ್ ಆದರೆ, ಹೋಶಂಗ್ ಷಾ ಸಮಾಧಿಯು ತನ್ನದೆ ಆದ ವೈಶಿಷ್ಟ್ಯತೆಯಿಂದ ಮೋಹಗೊಳಿಸಿ ತಾಜ್ ಮಹಲ್ ಅನ್ನು ನೋಡಲು ಮತ್ತಷ್ಟು ಚೈತನ್ಯವನ್ನು ತುಂಬಿಸುವುದರಲ್ಲಿ ಸಹಕಾರಿಯಾಗಿದೆ.
ಹೋಶಂಗ್ ಷಾನು ಮಾಳವಾ ಪ್ರಾಂತ್ಯದ ಮೊದಲ ಇಸ್ಲಾಂ ಅರಸು ಎಂಬುದಕ್ಕಿಂತ ಬೇರೆ ಕಾರಣಗಳಿಂದಲೂ ಇತಿಹಾಸ ಪುಟಗಳಲ್ಲಿ ತನ್ನ ಛಾಪು ಮೂಡಿಸಿರುವನು.ಮಾಳವಾದ ಅರಸನಾಗುವುದಕ್ಕಿಂತ ಮೊದಲು ಅವನು ಅಲ್ಪ್ ಖಾನ್ ಎಂಬ ಹೆಸರಿನಿಂದ ಪರಿಚಿತನಾಗಿದ್ದು, ಗದ್ದಿಗೆಯನ್ನೇರಿದ್ ಮೇಲೆ ತನ್ನನ್ನು ತಾನು ಹೊಶಂಗ್ ಷಾ ಎಂದು ಹೆಸರಿಸಿಕೊಂಡನು. 27 ವರ್ಷಗಳ ಕಾಲ ಆಡಳಿತ ನಡೆಸಿದ ಷಾ ನು ಕಲೆ ಮತ್ತು ವಾಸ್ತುಶಿಲ್ಪಗಳಲ್ಲಿ ತನಗಿದ್ದ ಅದ್ಭುತ ಅಭಿರುಚಿಯಿಂದಲೂ ಪ್ರಸಿದ್ಧನಾಗಿದ್ದ. ಅಲ್ಲದೆ ಮಾಂಡುವನ್ನು ಭಾರತದಲ್ಲೇ ಅತಿ ಬಲಿಷ್ಠ ಮತ್ತು ಸುರಕ್ಷಿತ ಕೋಟೆಯನ್ನಾಗಿಸಿದ ಖ್ಯಾತಿಯೂ ಹೊಶಂಗ್ ಷಾನಿಗೆ ಸಲ್ಲುತ್ತದೆ.