Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಬಾಗ್ ಗುಹೆಗಳು

ಬಾಗ್ ಗುಹೆಗಳು, ಮಾಂಡು

4

ಮಾಂಡುವಿನ ಸಮೀಪದಲ್ಲಿರುವ  ಬಾಗ್ ಗುಹೆಗಳು ಒಂಬತ್ತು  ಬೌದ್ಧ ಮಂದಿರಗಳ ಒಂದು ಗುಂಪಾಗಿದೆ. ಈ ಗುಹೆಗಳಲ್ಲಿನ ಒಳಭಾಗದ ಗೋಡೆಗಳ ಸುಂದರ ಅಲಂಕಾರವು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಬಾಗ್ ಗುಹೆಗಳ ನಿರ್ಮಾಣದ ಕಾಲಾವಧಿಯನ್ನು  ನಿಖರವಾಗಿ ಹೇಳಲು ಸಾಧ್ಯವಿಲ್ಲ ಆದರೆ ಕ್ರಿ.ಪೂ 400 ಮತ್ತು 700 ನಡುವಿನ ಅವಧಿಯಲ್ಲಿ ನಿರ್ಮಿಸಲಾಗಿರಬಹುದೆಂದು ಇತಿಹಾಸಗಾರರು ಅಭಿಪ್ರಾಯ ಪಟ್ಟಿದ್ದಾರೆ.

ಗುಹೆಯಲ್ಲಿನ ವರ್ಣಚಿತ್ರಗಳು ಸರಿಯುತ್ತಿರುವ ಸಮಯ ಮತ್ತು ಪ್ರಕೃತಿಯ ಎಲ್ಲಾ ವಿನಾಶಗಳ ನಡುವೆಯೂ ಉಳಿದುಕೊಂಡಿರುವುದು ಗಮನಾರ್ಹ. ಧಾರ್ಮಿಕ ಕಾರ್ಯಕ್ಕಗಿ ನಿರ್ಮಿಸಿದ ಕಟ್ಟಡಗಳಿಗೆ 'ಗುಹೆ' ಎಂಬ ಪದ ಬಳಸುವುದು ತಪ್ಪಾಗುತ್ತದೆ. ಏಕೆಂದರೆ ಅದು  ನೈಸರ್ಗಿಕವಾದವುಗಳಲ್ಲ.  ವಿಂಧ್ಯಾದಲ್ಲಿನ  ಸ್ವಾಭಾವಿಕ ಲಂಬವಾಗಿರುವ ಬಂಡೆಗಳನ್ನು ಕತ್ತರಿಸಿ ಮಾನವ ಈ ಸೋ-ಕಾಲ್ಡ ಗುಹೆಗಳನ್ನು ನಿರ್ಮಿಸಿರುವನು.

ಈ ಬಾಗ್ ಗುಹೆಗಳು ತಮ್ಮ ನಿರ್ಮಾಣ ಸ್ವರೂಪದಲ್ಲಿ ಅಜಂತಾ ಗುಹೆಗಳನ್ನು ಹೋಲುತ್ತವೆ. ಎಲ್ಲಾ ಗುಹೆಗಳು ಚತುಷ್ಕೋನೀಯ ಕೊಠಡಿಗಳು ಮತ್ತು ಒಂದು ಪ್ರಾರ್ಥನಾ ಸಭಾಂಗಣ,  ಕೊನೆಯಲ್ಲಿ ಒಂದು ಸಣ್ಣ ಕೋಣೆ  ಇದೇ ರೀತಿಯ ವಿನ್ಯಾಸಗಳನ್ನು ಹೊಂದಿವೆ. ಸಾವಿರಾರು ವರ್ಷಗಳ ಹಿಂದಿನ  ಆ ವರ್ಣಚಿತ್ರಗಳನ್ನು ನೋಡಲು ಈ ಗುಹೆಗಳಿಗೆ ಬೇಟಿನೀಡಲೇಬೇಕು. 

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City